ಶಿವಮೊಗ್ಗ: ಜೋಗದ ಬಳಿ ಕೆಎಸ್‌ಆರ್‌ಟಿಸಿ ಮತ್ತು ಒಮಿನಿ ನಡುವೆ ಅಪಘಾತ (Accident Case) ಸಂಭವಿಸಿದ್ದು, ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಾರಿನೊಳಗಿದ್ದ ವಡಂಬೈಲ್ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ.
ವಡಂಬೈಲ್ ಪದ್ಮಾವತಿ ದೇವಸ್ಥಾನ ಅರ್ಚಕ ಎಚ್.ಎಂ.ದೇವಯ್ಯ (60) ಮೃತಪಟ್ಟಿದ್ದು, ದೇವಸ್ಥಾನದ ಧರ್ಮದರ್ಶಿ ವೀರರಾಜಯ್ಯ ಜೈನ್ ಅವರಿಗೆ ತೀವ್ರ ಗಾಯಗಳಾಗಿವೆ. ಕಾಲು ಮುರಿತಕ್ಕೊಳಗಾಗಿರುವ ವೀರರಾಜಯ್ಯ ಅವರನ್ನು ಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರುನಿಂದ ಕಾರವಾರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿತ್ತು. ಜೋಗ-ಕಾರ್ಗಲ್ ನಡುವೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ವಡನ್‌ಬೈಲ್ ಪದ್ಮಾವತಿ ದೇವಸ್ಥಾನ ಅರ್ಚಕ ಹಾಗೂ ಧರ್ಮದರ್ಶಿಗಳು ಜೋಗದಿಂದ ವಡನ್‌ಬೈಲ್ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ದೇವ ಪೂಜಾರಿಗೆ ತೀವ್ರ ಗಾಯಗಳಾಗಿ ರಕ್ತ ಸ್ರಾವವಾಗಿತ್ತು. ಆದರೆ, ಆಂಬ್ಯುಲೆನ್ಸ್ ಬರುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ. ಪೊಲೀಸ್ ಇಲಾಖೆಯ 112 ಸೇವೆಗೆ ಕರೆ ಮಾಡಿದರೂ ರಕ್ಷಣೆ ಮುಂದಾಗಿಲ್ಲ ಎಂದೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Murder Case | ಅದು ಅಪಘಾತವಲ್ಲ ಕೊಲೆ; ಪ್ರಿಯಕರನ ಪ್ರೇಮಪಾಶಕ್ಕೆ ಸಿಲುಕಿ ಪ್ರಾಣಕಾಂತನ ಜೀವ ತೆಗೆದಳು