Site icon Vistara News

Accident Case | ಕಂಟೇನರ್ ಲಾರಿ ಹಿಂಬದಿ ನುಗ್ಗಿ ಕಾರು ಅಪ್ಪಚ್ಚಿ: ಇಬ್ಬರು ಗಂಭೀರ!

Accident Case

ಬೆಂಗಳೂರು: ಮುಂದೆ ಸಾಗುತ್ತಿದ್ದ ಕಬ್ಬಿಣ ಹೊತ್ತ ಕಂಟೇನರ್ ಲಾರಿಗೆ ಹಿಂಬದಿಯಲ್ಲಿ ವೇಗವಾಗಿ ಬಂದ ಕಾರು (Accident Case) ಗುದ್ದಿದ್ದು, ಲಾರಿಯ ಕೆಳಭಾಗದಲ್ಲಿ ನುಗ್ಗಿದೆ. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಸೂಳಗಿರಿ ಸಮೀಪದ ಚಿನ್ನಾರ್ ಬಳಿ ಅಪಘಾತ ಸಂಭವಿಸಿದ್ದು, ಹಿಂಬದಿಯಲ್ಲಿ ಬಂದಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ | Accident case | ನರಗುಂದ ಬಳಿ ಬಸ್-ಕಾರು ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರು ಗಂಭೀರ

ಲಾರಿ ಅಡಿಗೆ ಕಾರು ನುಗ್ಗಿದ ಪರಿಣಾಮ ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಇಬ್ಬರಿಗೆ ಪ್ರಾಣಾಹಾನಿ ಸಂಭವಿಸಿಲ್ಲ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಕಾರು ಚಾಲಕನ ಅತಿ ವೇಗದಿಂದ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

Exit mobile version