ಕಾರವಾರ: ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ್ ಬಳಿ (Accident case) ಕೆಟ್ಟು ನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ ಹೊಡೆದು ಕ್ಲೀನರ್ ಮೃತಪಟ್ಟಿದ್ದಾನೆ.
ಧಾರವಾಡ ಮೂಲದ ಇಸ್ಮಾಯಿಲ್ ರೋಣದ್ ಮೃತ ವ್ಯಕ್ತಿ. ಧಾರವಾಡದಿಂದ ಕುಮಟಾಕ್ಕೆ ಹಾಸ್ಟೆಲ್ ಆಹಾರ ಸಾಮಗ್ರಿಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಲಗೇಜ್ ವಾಹನವು ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ಇದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಲಾರಿಯ ಹಿಂಭಾಗಕ್ಕೆ ವೇಗವಾಗಿ ಗುದ್ದಿದ್ದರಿಂದ ಲಗೇಜ್ ವಾಹನವು ನಜ್ಜುಗುಜ್ಜಾಗಿದೆ. ಇದೇ ವೇಳೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Doctor death | ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ರೂಪಾ ಅಸಹಜ ಸಾವು, ಕಾಲು ಜಾರಿ ಬಿದ್ದರೇ?