ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ (drunk and driving) ಮಾಡುವವರ ಮೇಲೆ ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರು ಅಧ್ಯಯನ (NIMHANS Hospital Experts) ನಡೆಸುತ್ತಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು (Accident Case) ಹೆಚ್ಚಾಗುತ್ತಿದೆ. ಅದರಲ್ಲೂ ಕುಡಿದು ವಾಹನ ಚಲಾಯಿಸುವವರ ಪ್ರಮಾಣ ಹೆಚ್ಚಾಗಿದೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸದ್ಯ ಇದನ್ನು ತಡೆಗಟ್ಟಲು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ರೀತಿಯಲ್ಲಿ ಜಾಗೃತಿ ಮೂಡಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಕೋವಿಡ್ ಬಳಿಕ ಮದ್ಯಪಾನ ಮಾಡಿ ವಾಹನ ಚಲಾಯಿಸುವರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು 30 ದಿನಗಳ ಕಾಲ ಅಧ್ಯಯನ ನಡೆಸಿ ಬಳಿಕ ವ್ಯಸನಿಗಳಿಗೆ ಜಾಗೃತಿ ಮತ್ತು ಅರಿವು ಮೂಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ. ನಿಮ್ಹಾನ್ಸ್, ಬ್ಲೂಮ್ಬರ್ಗ್ ಫಿಲಾಂತ್ರೋಪಿಸ್ ಮತ್ತು ಜಾನ್ ಪಾಪ್‌ಕಿನ್ಸ್, ಇಂಟರ್‌ನ್ಯಾಷನಲ್ ಇಂಜುರಿ ರಿಸರ್ಚ್ ಯುನಿಟ್ ಸಹಯೋಗದಲ್ಲಿ ‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ’ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ.
ವರದಿಯು ಹೇಗೆ ಸಿದ್ಧವಾಗುತ್ತದೆ?
- ಪ್ರತಿ ದಿನದ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ಗಳ ಮೇಲೆ ನಿಗಾ
- ಪಾನಮತ್ತ ಚಾಲಕರ ಮಾಹಿತಿ ಸಂಗ್ರಹಣೆ
- ಚಾಲಕರ ವಯಸ್ಸು
- ವೈವಾಹಿಕ ಜೀವನದ ಮಾಹಿತಿ
- ಚಾಲಕರ ವಿದ್ಯಾರ್ಹತೆ
- ಎಷ್ಟು ದೂರದ ಹಿಂದೆ ಮದ್ಯಪಾನ ಮಾಡಿದ್ದಾರೆ?
- ಇನ್ನೂ ಎಷ್ಟು ದೂರ ಕ್ರಮಿಸಬೇಕು.?
- ಯಾವ ವರ್ಗದ ಜನರಿಂದ ಹೆಚ್ಚು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲು
ಪ್ರತಿದಿನ ರಾತ್ರಿ ಪ್ರತ್ಯೇಕ ಕಡೆಗಳಲ್ಲಿ ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ (ಸಿಡಿ) ಕೇಸ್ ದಾಖಲಿಸುತ್ತಾರೆ. ಇದೇ ವೇಳೆ ಎನ್‌ಜಿಒ ಮತ್ತು ನಿಮ್ಹಾನ್ ಸದಸ್ಯರು ಮದ್ಯಪಾನ ಮಾಡಿ ಪೊಲೀಸರಿಗೆ ಸೆರಸಿಕ್ಕ ಚಾಲಕ, ಸವಾರರ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ. ಚಾಲಕ/ ಸವಾರರ ವಯಸ್ಸು, ಕೆಲಸ, ವಿವಾಹಿತರೇ, ಅವಿವಾಹಿತರೇ, ಶಿಕ್ಷಣ, ಎಷ್ಟು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಎಷ್ಟು ದೂರದ ಹಿಂದೆ ಮದ್ಯ ಸೇವನೆ ಮಾಡಿದ್ದು, ಇನ್ನೂ ಎಷ್ಟು ದೂರ ಕ್ರಮಿಸಬೇಕು, ಯಾವ ಉದ್ದೇಶಕ್ಕೆ ಸೇವನೆ ಮಾಡಿದ್ದಾರೆ ಎಂಬ ವಿಚಾರವನ್ನು ಸೇರಿ ಇತರೆ ಮಾಹಿತಿ ಕಲೆ ಹಾಕುತ್ತಾರೆ.
ಯಾವ ವರ್ಗದ ಜನರು ಹೆಚ್ಚಾಗಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದರೆ, ಅವರಿಗೆ ಜಾಗೃತಿ ಮೂಡಿಸಲು ಮತ್ತು ತಿಳಿವಳಿಕೆ ನೀಡಲು ಅನುಕೂಲ ಆಗಲಿದೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವಾಗ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸರಿಗೆ ಸಹಾಯ ಆಗಲಿದೆ ಎಂದು ಸಂಚಾರ ಪೊಲೀಸ್ ಆಯುಕ್ತ ಡಾ ಎಂ.ಎ. ಸಲೀಂ ತಿಳಿಸಿದ್ದಾರೆ.
ಇದನ್ನೂ ಓದಿ: Karnataka CM : ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಡಿಸಿಎಂ; ಎಐಸಿಸಿಯಿಂದ ಅಧಿಕೃತ ಘೋಷಣೆ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವರದಿ ಪೊಲೀಸರ ಕೈ ಸೇರಲು ತಡ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ನಿಮ್ಹಾನ್ಸ್ ತಜ್ಞರು ವರದಿ ನೀಡಲಿದ್ದಾರೆ. ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸಹ ಹಲವು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅದರಲ್ಲಿ ಇದು ಸಹ ಒಂದು. ಸಂಚಾರಿ ಪೊಲೀಸರ ಈ ನೂತನ ಅಭಿಯಾನ ವರ್ಕ್ ಔಟ್ ಆಗುತ್ತಾ? ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ಗಳಿಗೆ ಕಡಿವಾಣ ಬೀಳುತ್ತಾ ಕಾದುನೋಡಬೇಕಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ