Site icon Vistara News

Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

slipped leg while wiping the window Woman dies after falling from 5th floor

ಬೆಂಗಳೂರು: ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವಾಗ ಮಹಿಳೆಯೊಬ್ಬರ ಕಾಲು ಜಾರಿದ್ದು ಆಯತಪ್ಪಿ 5ನೇ ಮಹಡಿಯಿಂದ (Accident Case) ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಖುಷ್ಬು ಅಶೀಷ್ ತ್ರಿವೇದಿ (31) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಶನಿವಾರ ನಡೆದಿದೆ.

ಖುಷ್ಬು ಅವರು ಮನೆಯೊಳಗಿದ್ದ ಟೇಬಲ್‌ ಮೇಲೆ ನಿಂತು ಕಿಟಕಿ ಬಳಿಯಿದ್ದ ಧೂಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ಕಾಲು ಜಾರಿದೆ ಅಷ್ಟೇ ಅದೇ ಕಿಟಕಿಯಿಂದ ಕೆಳಗೆ ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಆದರೆ ಆದಾಗಲೇ ಖಷ್ಬು ಮೃತಪಟ್ಟಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಗೆ ಕಿಟಕಿಗೆ ಗ್ರಿಲ್ ಅಳವಡಿಸದೇ ಇರುವುದೇ ಕಾರಣ ಎಂದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!

ಇನ್ನು ಈ ಸಂಬಂಧ ಸಾಮಾಜಿಕ ಹೋರಾಟಗಾರ ಸುಭಾಷ್‌ ಎಂಬುವವರು ದೂರು ದಾಖಲಿಸಿದ್ದಾರೆ. ಕಾಡುಗೋಡಿ ದೊಡ್ಡಬನಹಳ್ಳಿ ರಸ್ತೆಯಲ್ಲಿರುವ ಬಿ.ಡಿ.ಎ ವಿಧ್ಯಾಗಿರಿ ವಸತಿ ಸಮುಚ್ಚಯದಲ್ಲಿ 18 ಮಹಡಿಗಳಲ್ಲಿ ಸುಮಾರು 750 ಪ್ಲಾಟ್‌ಗಳನ್ನು ಹೊಂದಿದೆ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ತುರ್ತು ನಿರ್ಗಮನ, ಪ್ರಥಮ ಚಿಕಿತ್ಸೆ, ಫೈರ್ ಸೇಫ್ಟಿ, ಸೇಫ್ಟಿ ಮೇಸ್ ಇತ್ಯಾದಿ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೇ ಇದ್ದರೂ, ಸಾರ್ವಜನಿಕರಿಗೆ ವಾಸ ಮಾಡಲು ಹಂಚಿಕೆ ಮಾಡಿದ್ದಾರೆ.

ಇತ್ತೀಚೆಗೆ ನವ ವಿವಾಹಿತೆ ಖುಷ್ಬು ಎಂಬುವವರು 5 ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದಾರೆ. ಇದಕ್ಕೆಲ್ಲಾ ವಿಧ್ಯಾಗಿರಿ ವಸತಿ ಸಮುಚ್ಚಯದ ಅಸೋಶಿಯೇಟ್ ನಾರಾಯಣಸ್ವಾಮಿ, ಅಧಿಕಾರಿಗಳಾದ ಎ.ಇ.ಇ ಉದಯ ಕುಮಾರ್, ಇ.ಇಮೋಹನ್, ಎ.ಇ ಸುನೀಲ್‌ ನೇರ ಹೊಣೆ ಆಗಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version