Site icon Vistara News

Accident | ಏರ್‌ಪೋರ್ಟ್‌ ರಸ್ತೆ ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವು

Accident flyover

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿರುವ ಎಲಿವೇಟೆಡ್‌ ರಸ್ತೆ ಫ್ಲೈ ಓವರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಫ್ಲೈ ಓವರ್‌ನ ತಡೆಗೋಡೆಗೆ ಬೈಕ್‌ ಡಿಕ್ಕಿ ಹೊಡೆದು ಸವಾರರಿಬ್ಬರೂ ಕೆಳಗಿನ ರಸ್ತೆಗೆ ಉರುಳಿಬಿದ್ದು ಈ ದುರಂತ ಸಂಭವಿಸಿದೆ. ಇದೊಂದು ಸ್ವಯಂ ಅಪಘಾತವಾಗಿದ್ದು ಯಾವುದೇ ಇತರ ವಾಹನ ಇದರಲ್ಲಿ ಪಾಲ್ಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಕ್ರಮ್(28) ಮತ್ತು ಅಮಿತ್ ಸಿಂಗ್(27) ಸಾವನ್ನಪ್ಪಿದ ಯುವಕರು.

ಯುವಕರು ಫ್ಲೈಓವರ್‌ನಿಂದ ಹಾರಿಬಿದ್ದು ಮೃತಪಟ್ಟ ಜಾಗ ಇದು

ಯಲಹಂಕ ಸಂತೆ ಗೇಟ್ ಫ್ಲೈ ಓವರ್ ಮೇಲೆ ಸಾಗುತ್ತಿದ್ದಾಗ ಬೈಕ್‌ ತಡೆಗೋಡೆಗೆ ಬಡಿದು ಇಬ್ಬರು ಯುವಕರು ಹಾರಿ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ ಮತ್ತು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಇನ್ನೊಬ್ಬ ಸೌರಭ್‌ (೨೭) ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಣೋತ್ತರ ಪರೀಕ್ಷೆಗೆ ಸಾವನ್ನಪ್ಪಿದ ಯುವಕರ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತರು ಸ್ಥಳೀಯರಲ್ಲ. ಹಾಗಾಗಿ ಅವರ ಕುಟುಂಬಿಕರನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ | Bike Accident | ನಿಯಂತ್ರಣಕ್ಕೆ ಸಿಗದ ಬೈಕ್‌; ಫ್ಲೈಓವರ್‌ ಮೇಲಿಂದ ಬಿದ್ದು ಸವಾರ ಸಾವು

Exit mobile version