Site icon Vistara News

ಟಯರ್ ‌ಸ್ಫೋಟ ವಿಧಾನಸೌಧ ಮೆಟ್ರೋ ಸ್ಟೇಷನ್‌ಗೆ ಗುದ್ದಿದ ಕಾರು!

ಬೆಂಗಳೂರು: ಪ್ರತಿ ದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬೆಂಗಳೂರಿನ ವಿಧಾನಸೌಧ ಮೆಟ್ರೋ ಸ್ಟೇಷನ್‌ಗೆ ನ್ಯಾನೋ ಕಾರೊಂದು ಗುದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ವಿಧಾನಸೌಧದಿಂದ ಬಿಬಿಎಂಪಿಗೆ ಹೋಗೋವಾಗ ಈ ಅಪಘಾತ ಸಂಭಸಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ಸಿಬ್ಬಂದಿ ವಿಜಯ್ ಕುಮಾರ್ ಎಂಬುವವರಿಗೆ ಸೇರಿದ ನ್ಯಾನೋ ಕಾರು ಇದ್ದಾಗಿದ್ದು, ವಿಧಾನಸೌಧದಿಂದ ಬಿಬಿಎಂಪಿ ಕಡೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಟಯರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಫುಟ್‌ಪಾತ್ ಹತ್ತಿದ್ದು, ಮೆಟ್ರೋ ಕಾಂಪೌಂಡ್‌ಗೆ ಗುದ್ದಿದೆ. ಈ ವೇಳೆ ಕಾರು ಸ್ವಲ್ಪ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಯಾವುದೇ ಗಾಯಗಳಿಲ್ಲದೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ| Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್‌ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ

Exit mobile version