Site icon Vistara News

Accident News: 3ನೇ ಮಹಡಿಯಿಂದ ಬಿದ್ದು ಪೇಂಟರ್‌ ಸಾವು; ಆಂಬ್ಯುಲೆನ್ಸ್‌ ಬಾರದೆ ನಡು ರಸ್ತೆಯಲ್ಲೆ ಒದ್ದಾಡಿ ಪ್ರಾಣಬಿಟ್ಟ

ಪೇಂಟರ್‌ ಸಾವು

ಪೇಂಟರ್‌ ಸಾವು

ಬೆಂಗಳೂರು: ಕಟ್ಟಡಕ್ಕೆ ಪೇಂಟ್‌ ಮಾಡುತ್ತಿದ್ದ ಕಾರ್ಮಿಕರೊಬ್ಬರು (Painter) ಅಪಾರ್ಟ್ಮೆಂಟ್‌ನ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಜೆ.ಪಿ ನಗರ 5ನೇ ಬ್ಲಾಕ್ ಮಹಾರಾಜ ಪ್ಯಾಲೇಸ್ ಫೇಸ್‌ನಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ. ಪೇಂಟರ್ ನರಸಿಂಹ (50) ಮೃತ ದುರ್ದೈವಿ.

3ನೇ ಮಹಡಿಯ ಹೊರ ಭಾಗದಲ್ಲಿ ಪೇಂಟಿಂಗ್‌ ಮಾಡುವಾಗ ನರಸಿಂಹ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದರಿಂದ ಪೇಂಟರ್‌ ನರಸಿಂಹ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸರಿಯಾದ ಸುರಕ್ಷತಾ ಕ್ರಮ ಬಳಸದೆ ಕೆಲಸ ಮಾಡಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕೇವಲ ಹಗ್ಗ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಗ್ಗ ಕಟ್ ಆಗಿದ್ದು, ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಅಪಾರ್ಟ್ಮೆಂಟ್‌ನ 3ನೇ ಮಹಡಿಯಿಂದ ಬಿದ್ದು ಪೇಂಟರ್ ಸಾವು

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಸವಾರ

ಅಪಘಾತವಾಗಿ ಒಂದು ಗಂಟೆಯಾದರೂ ಆಂಬ್ಯುಲೆನ್ಸ್‌ ಬಾರದ ಕಾರಣಕ್ಕೆ ಯುವಕನೊಬ್ಬ ನಡು ರಸ್ತೆಯಲ್ಲೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಆನಂದ್ (30) ಮೃತದುರ್ದೈವಿ. ಹಾಸನ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ತಡರಾತ್ರಿ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಗಂಭೀರ ಗಾಯಗೊಂಡ ಆನಂದ ಉಸಿರು ಚೆಲ್ಲಿದ್ದಾರೆ.

ಮೃತ ಬೈಕ್‌ ಸವಾರ ಆನಂದ್‌

ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಆನಂದ್‌ ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದ ಕಾರಣ ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಒಂದು ಗಂಟೆಯಾದರೂ ಆಂಬ್ಯುಲೆನ್ಸ್‌ ಬಾರದೇ ಆನಂದ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Weather Report: ಚಾಮರಾಜ ನಗರದಲ್ಲಿ ಮಳೆಗೆ ಮನೆ ಚಾವಣಿ, ಗೋಡೆ ಕುಸಿತ; ಗುಂಡ್ಲುಪೇಟೆಯಲ್ಲಿ ಬೆಳೆ ನೀರುಪಾಲು

ಇತ್ತ ಘಟನೆ ಖಂಡಿಸಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದರು.ಸ್ಥಳಕ್ಕೆ ಪೊಲೀಸರು ಆಗಮಿಸಿದ ಹಾಸನ ಗ್ರಾಮಾಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Exit mobile version