ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿ ಹೈಡ್ರಾಲಿಕ್ ರಿಪೇರಿ ವೇಳೆ ಏಕಾಏಕಿ ಟಿಪ್ಪರ್ ಕುಸಿದು ಚಾಲಕನೊಬ್ಬ ಮೃತಪಟ್ಟಿರುವ (Accident News) ಘಟನೆ ನಡೆದಿದೆ. ಬನ್ನೇರುಘಟ್ಟ ಸಮೀಪದ ಜೆಲ್ಲಿ ಮಿಷನ್ ವಾಸಿ ನಟರಾಜ್ (40) ಮೃತ ದುರ್ದೈವಿ.
ಲಾರಿ ರಿಪೇರಿ ಮಾಡುವಾಗ ಆಯಿಲ್ ಲೀಕ್ ಆಗಿ ಹೈಡ್ರಾಲಿಕ್ ಪೈಪ್ ಸಿಡಿದಿದೆ. ಈ ವೇಳೆ ಏಕಾಏಕಿ ಟಿಪ್ಪರ್ ಕುಸಿದಿದೆ, ಚಾಲಕ ನಟರಾಜ್ ಚಾಸಿ ಮತ್ತು ಟಿಪ್ಪರ್ ನಡುವೆ ಸಿಲುಕಿ ಪ್ರಾಣ ಬಿಟ್ಟಿದಾನೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಟಿಪ್ಪರ್ ಲಾರಿ ಈಶ್ವರ್ ಎಂಬುವವರಿಗೆ ಸೇರಿದಾಗಿದ್ದು, ಯಾವುದೇ ಸುರಕ್ಷತಾ ಕ್ರಮವಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಟಿಪ್ಪರ್ ಇಳಿಯದಂತೆ ಯಾವುದೇ ಸಪೋರ್ಟ್ ನೀಡದೆ ಇರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಟಿಪ್ಪರ್ ಲಾರಿ ಮಾಲೀಕ ಈಶ್ವರ್, ನಿರ್ಲಕ್ಷ್ಯ ವಹಿಸಿದ ಮೆಕಾನಿಕ್ ಮೇಲೂ ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Robbery Case: ವೀಸಾ ವೆರಿಫಿಕೇಶನ್ ನೆಪದಲ್ಲಿ ಮನೆಯೊಳಗೆ ನುಗ್ಗಿ ದರೋಡೆ; ಅಪರಿಚಿತರ ಬಗ್ಗೆ ಹುಷಾರ್!
ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ