Site icon Vistara News

ಬೆಂಗಳೂರಲ್ಲಿ ಅಪಘಾತ, KGF ನಟನ ಬೆಂಜ್ ಕಾರು ಜಖಂ

ಕೆಜಿಎಫ್

ಬೆಂಗಳೂರು: ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕ್ಯಾಂಟರ್‌ ಡಿಕ್ಕಿಯಾಗಿ ಕೆಜಿಎಫ್ ನಟನ ಬೆಂಜ್‌ ಕಾರು ಜಖಂಗೊಂಡಿದೆ. ಕೆಜಿಎಫ್ ಸಿನಿಮಾದಲ್ಲಿ ನಾಯಕನಷ್ಟೆ ಹೆಸರು ಮಾಡಿದ್ದ ಆಂಡ್ರ್ಯೂಸ್ ಪಾತ್ರದ ಖ್ಯಾತಿಯ ಕಳನಾಯಕ ಅವಿನಾಶ್ ಕಾರು ಅಪಘಾತಕ್ಕೀಡಾಗಿದೆ.

ಬುಧವಾರ ಅವಿನಾಶ್ ಚಲಿಸುತ್ತಿದ್ದ ಬೆಂಜ್ ಕಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಐಷಾರಾಮಿ ಕಾರು ಸಂಪೂರ್ಣ ಜಖಂ‌ ಆಗಿದೆ. ಬುಧವಾರ ಮಧ್ಯಾಹ್ನ ಎಂಜಿ ರಸ್ತೆ ಕಡೆ ಹೋಗುವಾಗ ಕ್ಯಾಂಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟ ಅವಿನಾಶ್‌ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಘಟನೆ ಹಿನ್ನೆಲೆಯಲ್ಲಿ ಕ್ಯಾಂಟರ್ ಚಾಲಕ ಶಿವನಗೌಡನನ್ನು ಪೊಲೀಸರು ಬಂಧಿಸಿದ್ದು, ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ | ನ್ಯಾನೋ ನಾರಾಯಣಪ್ಪ | ರಾವಣನ ಅವತಾರದಲ್ಲಿ ಕೆಜಿಎಫ್ ತಾತ

Exit mobile version