ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಆ್ಯಸಿಡ್ (Acid Attack) ದಾಳಿಗೆ ಒಳಗಾಗಿದ್ದ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆಕೆಯ ಆರೋಗ್ಯದಲ್ಲಿ ನಿರೀಕ್ಷೆಗೂ ಮೀರಿ ಸುಧಾರಣೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
72 ದಿನಗಳ ಬಳಿಕ ಐಸಿಯು ವಾರ್ಡ್‌ನಿಂದ ನಾರ್ಮಲ್ ಸ್ಪೆಷಲ್ ವಾರ್ಡ್‌ಗೆ ಯುವತಿಯನ್ನು ಸ್ಥಳಾಂತರಿಸಲಾಗಿದೆ. ದೇಹದ ಮೇಲೆ ಆ್ಯಸಿಡ್ ಬಿದ್ದ ಜಾಗದಲ್ಲಿ ಒಂದು ಹಂತದ ಪ್ಲಾಸ್ಟಿಕ್ ಸರ್ಜರಿ ಮುಕ್ತಾಯಗೊಳ್ಳುತ್ತಿದೆ. ಫಿಸಿಯೋಥೆರಪಿಸ್ಟ್ ಸ್ಪೆಷಲಿಸ್ಟ್ ಸಿಬ್ಬಂದಿಯಿಂದ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Acid Attack | ಆ್ಯಸಿಡ್ ಸಂತ್ರಸ್ತೆಗೆ ಕಿಚ್ಚ ಸುದೀಪ್ ನೋಡುವ ಬಯಕೆ
ಪೈಪ್ ಮೂಲಕ ಲಘು ನೀರಿನಾಂಶದ ಆಹಾರ ನೀಡಲಾಗುತ್ತಿದ್ದ ಯುವತಿಗೆ ಆರೋಗ್ಯದಲ್ಲಿ ಸುಧಾರಣೆ ಹಿನ್ನೆಲೆಯಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ. ಸರ್ಜರಿ ಸ್ಥಳದಲ್ಲಿ ಇನ್ಫೆಕ್ಷನ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೆರಡು ತಿಂಗಳು ಚಿಕಿತ್ಸೆ ಮುಂದುವರಿಸಬೇಕೆಂದು ವೈದ್ಯರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಮಗಳ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪೋಷಕರಲ್ಲಿ ಭರವಸೆ ಮೂಡಿದೆ.
ಏಪ್ರಿಲ್ 28ರಂದು ಸುಂಕದಕಟ್ಟೆ ಕಾಮಾಕ್ಷಿಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಡಿತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಕಾಮಾಕ್ಷಿಪಾಳ್ಯ ಪೊಲೀಸರು ಆ್ಯಸಿಡ್ ನಾಗೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೂ ಮೊದಲು ನ್ಯಾಯಾಲಯದ ಬಳಿ ಬಂದಿದ್ದ ನಾಗೇಶ ವಕೀಲರನ್ನು ಭೇಟಿಯಾಗಿದ್ದ. ಯಾರೂ ತನ್ನ ಕೇಸ್ ತೆಗೆದುಕೊಳ್ಳದೇ ನಿರಾಕರಿಸಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ರಮಣಶ್ರೀ ಆಶ್ರಮದಲ್ಲಿ ಸನ್ಯಾಸಿಯಂತೆ ನಟಿಸುತ್ತಿದ್ದ ನಾಗೇಶನನ್ನು ಪೊಲೀಸರು ಸೆರೆ ಹಿಡಿದಿದ್ದರು.
ಇದನ್ನೂ ಓದಿ | Acid Attack | ಆ್ಯಸಿಡ್ ದಾಳಿಗೊಳಗಾದ ಯುವತಿ ಚೇತರಿಕೆ