Site icon Vistara News

Acid Attack | ಆ್ಯಸಿಡ್ ಸಂತ್ರಸ್ತೆಗೆ ಕಿಚ್ಚ ಸುದೀಪ್‌ ನೋಡುವ ಬಯಕೆ

Acid Attack

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ (Acid Attack) ಮಂಗಳವಾರಕ್ಕೆ (ಜೂನ್‌ 28) ಬರೋಬ್ಬರಿ ಎರಡು ತಿಂಗಳು ಕಳೆದಿವೆ. ಏಪ್ರಿಲ್‌ 28ರ ಗುರುವಾರ ಬೆಳಗ್ಗೆಯಿಂದಲೂ ಆಸ್ಪತ್ರೆಯಲ್ಲಿರುವ ಸಂತ್ರಸ್ತೆ ಅನೇಕ ಶಸ್ತ್ರಚಿಕಿತ್ಸೆಗಳ ಬಳಿಕ ಗುಣಮುಖವಾಗುವತ್ತ ಸಾಗುತ್ತಿದ್ದಾಳೆ. ಇದೇ ವೇಳೆ ಚಿತ್ರನಟ ಕಿಚ್ಚ ಸುದೀಪ್‌ ಅವರನ್ನು ಕಾಣುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

ಪೋಷಕರಿಂದ ಸಾಕಷ್ಟು ಧೈರ್ಯ ಪಡೆದಿರುವ ಯುವತಿಗೆ ಒಂದು ವಾರದಿಂದ ಅವರ ನೆಚ್ಚಿನ ನಟ ನೋಡುವ ಚಿಂತೆ ಆಗಿದೆಯಂತೆ. ಕಿಚ್ಚನ ಅಭಿಮಾನಿಯಾಗಿರುವ ಯುವತಿ, ಕುಟುಂಬಸ್ಥರ ಎದುರು ತನ್ನ ಅಭಿಲಾಷೆ ವ್ಯಕ್ತಪಡಿಸಿದ್ದಾಳೆ. ಸಾಧ್ಯವಾದರೆ ಸುದೀಪ್‌ ಅವರನ್ನು ಕರೆಸುವುದಾಗಿ ಕುಟುಂಬಸ್ಥರು ಯುವತಿಗೆ ಭರವಸೆ ನೀಡಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಈ ಅಭಿಮಾನಿಯ ಆಸೆಯನ್ನು ಸುದೀಪ್ ಅವರು ಈಡೇರಿಸಲಿ ಎನ್ನುವುದೇ ಅವರ ಕುಟುಂಬದ ಮನವಿ.

ಇದನ್ನೂ ಓದಿ | Acid Attack | ಆ್ಯಸಿಡ್ ದಾಳಿಗೊಳಗಾದ ಯುವತಿ ಚೇತರಿಕೆ

ಏಪ್ರಿಲ್‌ 28ರ ಬೆಳಗ್ಗೆ 8-30ರ ಸುಮಾರಿಗೆ ನಾಗೇಶ್‌ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ. ಯುವತಿ ಇದೀಗ ಸೆಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಮುಖ ಹಂತದ ಸರ್ಜರಿಯನ್ನು ವೈದ್ಯರು ಈಗಾಗಲೇ ಮುಗಿಸಿದ್ದಾರೆ. ಇದೀಗ ಒಂದೇ ಡೈರೆಕ್ಷನ್‌ನಲ್ಲಿ ಮಲಗುತ್ತಿದ್ದ ಯುವತಿಯನ್ನು ಎಬ್ಬಿಸಿ ಎರಡೂ ಬದಿಯಲ್ಲಿ ಮಲಗಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ಅಟ್ಯಾಕ್‌; ಪ್ರಿಯಕರನ ಕೃತ್ಯ, ಮಹಿಳೆಗೆ ಗಂಭೀರ ಗಾಯ

Exit mobile version