Site icon Vistara News

Actor Duniya Vijay | ಹಲ್ಲೆ ಪ್ರಕರಣ: ಪಾನಿಪುರಿ ಕಿಟ್ಟಿ ಬಳಿಕ ಈಗ ದುನಿಯಾ ವಿಜಯ್‌ಗೆ ಹೈಗ್ರೌಂಡ್ಸ್‌ ಪೊಲೀಸರಿಂದ ನೋಟಿಸ್‌

Actor Duniya Vijay panipuri kitty FIR

ಬೆಂಗಳೂರು: ನಟ ದುನಿಯಾ ವಿಜಯ್‌ (Actor Duniya Vijay) ಹಾಗೂ ಅವರ ಮಗನಿಗೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಹಾಗೂ ಅವರ ಅಣ್ಣನ ಮಗ ಮಾರುತಿ ಗೌಡ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದ್ದ ಬೆನ್ನಲ್ಲೇ, ಇದೀಗ ವಿಚಾರಣೆಗೆ ಆಗಮಿಸಿ ದಾಖಲೆಗಳನ್ನು ಹಾಜರುಪಡಿಸುವಂತೆ ಹೈಗ್ರೌಂಡ್ಸ್‌ ಪೊಲೀಸರು ನಟ ದುನಿಯಾ ವಿಜಯ್‌ಗೆ ನೋಟಿಸ್ ನೀಡಿದ್ದಾರೆ.

ಹಲ್ಲೆ ಸಂಬಂಧ ಹೈಗ್ರೌಂಡ್‌ ಪೊಲೀಸ್‌ ಸ್ಟೇಷನ್‌ನಲ್ಲಿ ನಟ ವಿಜಯ್‌ ದಾಖಲಿಸಿದ್ದ ದೂರಿನ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದು, ಪಾನಿಪುರಿ ಕಿಟ್ಟಿ ಎಸಿಪಿ ಕಚೇರಿಗೆ ಬಂದು ವಿಚಾರಣೆಯನ್ನು ಎದುರಿಸಿದ್ದರು. ಅಂಬೇಡ್ಕರ್ ಭವನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಕೌಂಟರ್ ಕೇಸ್ ಇದಾಗಿದೆ. ಒಂದು ಕೇಸ್‌ನಲ್ಲಿ ತನಿಖೆ ಮಾಡಿ ಚಾರ್ಜ್‌ಶೀಟ್ ಮಾಡಲಾಗಿದ್ದು, ಮತ್ತೊಂದು ಕೇಸ್ ನ್ಯಾಯಾಲಯದ ಅನುಮತಿಯಂತೆ ಪಾನಿಪುರಿ ಕಿಟ್ಟಿ ಮೇಲೆ ಎಫ್ಆರ್‌ಐ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಪಾನಿಪುರಿ ಕಿಟ್ಟಿಗೆ ನೋಟಿಸ್ ಕೊಟ್ಟು ಕರೆಸಲಾಗಿತ್ತು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ನಟ ವಿಜಯ್‌ಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿ ದಾಖಲಾತಿ ಹಾಜರು ಪಡೆಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇತ್ತ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ನಟ ವಿಜಯ್‌ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಅಗ್ರಿಮೆಂಟ್ ಆಗಿರುವ ಚಲನಚಿತ್ರದ ಶೂಟಿಂಗ್ ನಡೆಯುತ್ತಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ವಿಚಾರಣೆ ಹಾಜರಾಗಲು ಕೆಲ ದಿನಗಳ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯ್‌ಗೆ ಎರಡನೇ ನೋಟಿಸ್ ನೀಡಲಿದ್ದಾರೆ.

ಏನಿದು ಪ್ರಕರಣ?
2018ರ ಸೆಪ್ಟೆಂಬರ್‌ 23ರಂದು ವಸಂತನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ವಿಜಯ್‌ ಹಾಗೂ ಪಾನಿಪುರಿ ಕಿಟ್ಟಿ ಗ್ಯಾಂಗ್‌ ನಡುವೆ ಗಲಾಟೆ ನಡೆದಿತ್ತು.

ಈ ಮಧ್ಯೆ ಗಲಾಟೆಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪಾನಿಪುರಿ ಕಿಟ್ಟಿ ಅಣ್ಣನ ಮಗನನ್ನು ಕಿಡ್ನಾಪ್‌ ಮಾಡಲಾಗಿದೆ ಎಂದು ನಟ ವಿಜಯ್‌ ವಿರುದ್ಧ ದೂರು ದಾಖಲಿಸಿದ್ದರು. ಈ ವೇಳೆ ಪೊಲೀಸರು ನಟ ವಿಜಯ್‌ಗೆ ಮಾರುತಿ ಗೌಡನನ್ನು ಠಾಣೆಗೆ ಕರೆ ತರುವಂತೆ ತಾಕೀತು ಮಾಡಿದ್ದರು. ಮಾರುತಿಯನ್ನು ಠಾಣೆ ಮುಂಭಾಗ ಕರೆತರುತ್ತಿದ್ದಂತೆ ಪಾನಿಪುರಿ ಕಿಟ್ಟಿ ಸಹಚರರು ಗುಂಪುಗೂಡಿ ಅಲ್ಲಿಯೇ ಕೊಲೆ ಮಾಡುವುದಾಗಿ, ವಿಜಯ್‌ ಮಗನನ್ನು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಗುಂಪಿನಲ್ಲಿದ್ದ ಒಬ್ಬ, ಚಾಕುವನ್ನು ಹಿಡಿದುಕೊಂಡು ತಿವಿಯಲು ಬಂದಾಗ, ವಿಜಯ್‌ ತಪ್ಪಿಸಿಕೊಂಡು ಠಾಣೆಗೆ ಓಡಿ ಬಂದಿದ್ದರು. ವಿಜಯ್‌ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಲಾಗಿತ್ತು. ಅಲ್ಲದೆ, ತನಗೆ ಮತ್ತು ತನ್ನ ಮಗನಿಗೆ ಜೀವ ಬೆದರಿಕೆ ಹಾಕಿರುವ ಪಾನಿಪರಿ ಕಿಟ್ಟಿ, ಮಾರುತಿಗೌಡ ಹಾಗೂ ಅವರ ಸಹಚರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದುನಿಯಾ ವಿಜಯ್ ದೂರು ನೀಡಿದ್ದರು.

ಕೌಂಟರ್‌ ಕಂಪ್ಲೇಂಟ್‌ ದಾಖಲು
ಕಾರಿನಲ್ಲಿ ಮಾರುತಿ ಗೌಡಗೆ ವಿಜಯ್‌ ಗ್ಯಾಂಗ್‌ ಹಿಗ್ಗಾಮುಗ್ಗ ಥಳಿಸಿದೆ ಎಂದು ಹೇಳಲಾಗಿದ್ದು, ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಎರಡೂ ಕಡೆಯವರು ಕೌಂಟರ್ ಕಂಪ್ಲೇಂಟ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು.

ಸದ್ಯ ವಿಜಯ್ ಮೇಲಿರುವ ದೂರು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ದೂರು ಸಾಕ್ಷ್ಯ ಕೊರತೆಯಿಂದಾಗಿ ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. ಈಗ ಇನ್ನೊಮ್ಮೆ ಕೇಸ್ ದಾಖಲಿಸಿದ್ದರಿಂದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ತನಿಖೆ ನಡೆಸಲು ಸೂಚನೆ ನೀಡಿದೆ. ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದೀಗ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್‌ಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ | Gali Janardhana Reddy | ಗಂಗಾವತಿಯಲ್ಲಿ ರೆಡ್ಡಿ ಎರಡನೇ ಇನಿಂಗ್ಸ್‌; 101 ಟಗರುಗಳ ಕಾಣಿಕೆ ಘೋಷಿಸಿದ ಅಭಿಮಾನಿ

Exit mobile version