Site icon Vistara News

Actress Ramya | ಸದ್ದಿಲ್ಲದೆ ಶೂಟಿಂಗ್‌ ಮುಗಿಸಿದ ಸ್ವಾತಿ ಮುತ್ತಿನ ಮಳೆ ಹನಿಯೇ; ರಮ್ಯಾರಿಂದ ಮತ್ತೊಂದು ಸರ್ಪ್ರೈಸ್‌

ಬೆಂಗಳೂರು: ನಟಿ, ನಿರ್ಮಾಪಕಿ ರಮ್ಯಾ (Actress Ramya) ಅವರಿಗೆ ಸರ್ಪ್ರೈಸ್ ಕೊಡುವುದು ಎಂದರೆ ತುಂಬಾ ಇಷ್ಟವೆಂದು ಕಾಣುತ್ತದೆ. ಇದೇ ಕಾರಣಕ್ಕೆ ಪದೇಪದೆ ಅನಿರೀಕ್ಷಿತ ಸುದ್ದಿಗಳನ್ನು ರಿವೀಲ್ ಮಾಡುತ್ತಿದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೆ ಅಂತಹದ್ದೇ ಸರ್ಪ್ರೈಸ್ ಕೊಟ್ಟಿರುವ ರಮ್ಯಾ, “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾ ಶೂಟಿಂಗ್‌ ಅನ್ನು ಸದ್ದಿಲ್ಲದೆ ಮುಗಿಸಿದ್ದಾರೆ.

ಉತ್ತರಕಾಂಡ ಸಿನಿಮಾ ಮುಹೂರ್ತದ ಬೆನ್ನಲ್ಲೇ ಮೋಹಕ ತಾರೆ ರಮ್ಯಾ, ತಮ್ಮ ನಿರ್ಮಾಣದ ಸಿನಿಮಾ ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದ್ದರು. ಇದೀಗ ಚಿತ್ರದ ಸಂಪೂರ್ಣ ಚಿತ್ರೀಕರಣವೇ ಮುಗಿಸಲಾಗಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಲಾಗಿದೆ.

ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಇನ್ನೂ ಶೂಟಿಂಗ್ ಶುರು ಆಗಲು ಸಮಯ ಹಿಡಿಯಲಿದೆ. ಹಾಗಂತೆ, ಹೀಗಂತೆ ಎಂದು ಅಂತೆ ಕಂತೆಗಳ ಸುದ್ದಿ ಬರುತ್ತಿರುವ ಮಧ್ಯೆದಲ್ಲಿಯೇ ಚಿತ್ರೀಕರಣವನ್ನೇ ಮುಗಿಸಲಾಗಿದೆ ಎಂಬ ಬ್ರೇಕಿಂಗ್‌ ಸುದ್ದಿಯನ್ನು ರಮ್ಯಾ ಟೀಂ ನೀಡಿದೆ.

ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೂಟಿಂಗ್‌ ಮುಕ್ತಾಯಗೊಳಿಸಿದೆ. ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್‌ ಬಿ. ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್‌ ಮತ್ತು ರಾಜ್‌ ಶೆಟ್ಟಿ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ರಮ್ಯಾ ಅವರು ಉತ್ತರಕಾಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ | Actress Ramya | ಕಾಲಿವುಡ್‌ ನಟ ಧನುಷ್‌ ಜತೆ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ!

Exit mobile version