ಬೆಂಗಳೂರು: ಚಂದ್ರಯನ ಮೇಲ್ಮೈ ಅಧ್ಯಯನಕ್ಕಾಗಿ ಇಸ್ರೋ ಸೆಪ್ಟೆಂಬರ್ 2ರಂದು ಆದಿತ್ಯ ಎಲ್ 1 ಮಿಷನ್ (Aditya L1 Mission) ಕೈಗೊಂಡಿದೆ. ಸೂರ್ಯನ ಎಲ್ ಪಾಯಿಂಟ್ (ಲ್ಯಾಗ್ರೇಂಜ್ ಪಾಯಿಂಟ್) ತಲುಪಲು ಆದಿತ್ಯ ಎಲ್ 1 ಮಿಷನ್‌ಗೆ 125 ದಿನ ಬೇಕಾಗಿದೆ. ಇನ್ನು ಎಲ್ ಪಾಯಿಂಟ್‌ನತ್ತ ತೆರಳುತ್ತಿರುವ ಆದಿತ್ ಎಲ್ ಮಿಷನ್, ಸೂರ್ಯ ಹಾಗೂ ಚಂದ್ರನ ಸೆಲ್ಫಿ ತೆಗೆದು ಕಳುಹಿಸಿದೆ. ಈ ಕುರಿತು ಇಸ್ರೋ ಮಾಹಿತಿ ನೀಡುವ ಜತೆಗೆ, ವಿಡಿಯೊವನ್ನು ಹಂಚಿಕೊಂಡಿದೆ.
ಆದಿತ್ಯ ಎಲ್ 1 ಮಿಷನ್‌ನ ಪೇಲೋಡ್ ಆಗಿರುವ ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (VELC) ಹಾಗೂ ಸೂಟ್ ಇನ್‌ಸ್ಟ್ರುಮೆಂಟ್ಸ್ (SUIT instruments) ಕ್ಯಾಮೆರಾವು ಸೆಪ್ಟೆಂಬರ್ 4ರಂದು ಸೂರ್ಯ ಹಾಗೂ ಚಂದ್ರನ ಫೋಟೊ ಕಳುಹಿಸಿದೆ. ಇದು ಭೂಮಿಯ ಚಿತ್ರವನ್ನೂ ತೆಗೆದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇಸ್ರೋ ಶೇರ್ ಮಾಡಿದ ವಿಡಿಯೊ
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್ ಕಾರ್ಯನಿರ್ವಹಿಸಲಿದೆ.
ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.
ಇದನ್ನೂ ಓದಿ: Aditya L1 Mission: ಭೂಮಿಯ ಸುತ್ತ ಎರಡನೇ ಸುತ್ತು ಮುಗಿಸಿದ ಆದಿತ್ಯ L1, ಇನ್ನೂ 3 ಸುತ್ತು ಬಾಕಿ
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.