Site icon Vistara News

Pejawar Swamiji: ದೇವಾಲಯಗಳ ಆಡಳಿತ ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು: ಪೇಜಾವರ ಶ್ರೀ

Administration of Hindu temples should be handed over to Hindus says Pejawara Shri

ಗಂಗಾವತಿ: ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳನ್ನು ಆಯಾ ಪ್ರದೇಶದ ಹಿಂದೂಗಳ ಆಡಳಿತಕ್ಕೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejawar Swamiji) ಹೇಳಿದರು.

ನಗರದಲ್ಲಿ ಈ ಕುರಿತು ಮಾತನಾಡಿ, ದೇಶದ ಬಹುತೇಕ ಅನ್ಯ ಧರ್ಮಿಯರ ಪ್ರಾರ್ಥನಾ ಮಂದಿರಗಳನ್ನು ಆಯಾ ಸಮುದಾಯಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಹಿಂದೂ ದೇವಾಲಯಗಳ ಆಡಳಿತ ಮಾತ್ರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ. ಆಯಾ ಧರ್ಮದ ವ್ಯಾಪ್ತಿಗೆ ಆಯಾ ದೇಗುಲಗಳ ಆಡಳಿತ ನೀಡುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಇದೆ. ಆದರೆ ಸರ್ಕಾರಗಳು ಎಲ್ಲಿಯೂ ಈ ಆದೇಶವನ್ನು ಜಾರಿಗೆ ತರುತ್ತಿಲ್ಲ. ಈ ಕಾರ್ಯ ತಕ್ಷಣದಿಂದ ಆಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: SSLC 2 Exam Time Table : ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ

ಐಎಎಸ್‌ನಂತ ಪರೀಕ್ಷೆಯಲ್ಲಿ ದಲಿತರು ಹಿಂದುಳಿಯಲು ಅಥವಾ ಆಯಕಟ್ಟಿನ ಹುದ್ದೆಗೆ ಆಯ್ಕೆ ಹೊಂದದಿರಲು ಮುಖ್ಯ ಕಾರಣ ಮೇಲ್ವರ್ಗದವರು ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಇದೊಂದು ಆಧಾರ ರಹಿತ ಆರೋಪ. ಪರೀಕ್ಷೆಗಳು ಎಲ್ಲರಿಗೂ ಒಂದೇ ಇರುತ್ತದೆ. ಎಲ್ಲರಿಗೂ ನೂರು ಅಂಕ ಇರುತ್ತದೆ. ಅಭ್ಯರ್ಥಿಗಳು ಗ್ರಹಿಸುವ ಸಾಮರ್ಥ್ಯದ ಮೇಲೆ ಅಂಕಗಳು ಸಿಗುತ್ತವೆಯೇ ವಿನಃ, ಮೇಲ್ವರ್ಗ ಮತ್ತು ಕೆಳವರ್ಗ ಎಂಬ ತಾರತಮ್ಯ ನೀತಿಯಿಂದಲ್ಲ ಎಂದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೀಗಳು, ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಷ್ಟು ತ್ವರಿತವಾಗಿ ಮಸೂದೆ ಮಂಡನೆಯಾಗಿ ಕಾಯ್ದೆ ಜಾರಿಯಾಗಬೇಕು ಎಂದರು.

ಐದಾರು ಶತಮಾನಗಳ ರಾಮಮಂದಿರ ನಿರ್ಮಾಣ ಕನಸು ಇಂದು ನನಸಾಗಿದೆ. ಇಲ್ಲಿಗೆ ನಮ್ಮ ಕಾರ್ಯ ಮುಗೀತು ಎಂದು ಸುಮ್ಮನೆ ಕೂರುವ ಹಾಗಿಲ್ಲ. ಆ ಮಂದಿರವನ್ನು ಸೂರ್ಯ-ಚಂದ್ರರು ಇರೋವರೆಗೂ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ.

ಇದನ್ನೂ ಓದಿ: Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

ಮಂದಿರದ ಮೇಲೆ ಯಾವುದೇ ದಾಳಿಯಾಗದಂತೆ, ಧಕ್ಕೆಯಾಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಭಾರತೀಯ ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬ ಹಿಂದೂ ಈ ಕೆಲಸ ಮಾಡಬೇಕು. ಹಿಂದೂಗಳು ಹಿಂದೂಗಳಾಗಿ ಉಳಿದರೆ ಮಾತ್ರ ಈ ಕೆಲಸ ಸಾಧ್ಯ ಎಂದು ತಿಳಿಸಿದರು.

Exit mobile version