ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಮಗುವನ್ನು ಒಂದನೇ ತರಗತಿಗೆ ಸೇರಿಸಬೇಕಾದರೆ ೬ ವರ್ಷ ಪೂರ್ತಿಯಾಗಿರಬೇಕು. ಇದಕ್ಕೆ ಕುರಿತಂತೆ ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ ಒಂದನೇ ತರಗತಿಗೆ ಸೇರಿಸಬೇಕಾದರೆ ಕನಿಷ್ಠ ೫ ವರ್ಷ ೫ ತಿಂಗಳು ಹಾಗೂ ಗರಿಷ್ಠ ೭ ವರ್ಷ ನಿಗದಿ ಮಾಡಲಾಗಿತ್ತು. ಆ ಆದೇಶವನ್ನು ಶಿಕ್ಷಣ ಇಲಾಖೆ ಬದಲಾವಣೆ ಮಾಡಿದ್ದು, ಪ್ರತಿ ವರ್ಷ ಜೂನ್ ೧ನೇ ತಾರಿಕಿಗೆ ಆರು ವರ್ಷ ಪೂರ್ಣಗೊಂಡಿರಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೆಸರು ಬದಲು