ಬೆಂಗಳೂರು: ಖ್ಯಾತ ಗಾಯಕ, ಸಂಗೀತ ಸಂಯೋಜಕ ಅದ್ನಾನ್ ಸಮಿ (Adnan Sami) ಇನ್ಸ್ಟಾ ಖಾತೆಯ ಮೂಲಕ ಶುಭ ವಿದಾಯʼ ಎಂದು ಹೇಳಿರುವುದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅದ್ನಾನ್ ಸಮಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಇರುವ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಉರ್ದು ಭಾಷೆಯಲ್ಲಿ ಅಲ್ವಿದಾ (ವಿದಾಯ) ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಅನಿರೀಕ್ಷಿತ ಪೋಸ್ಟ್ ಕಂಡು ಅವರ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ವಾಪಾಸ್ ಪಾಕಿಸ್ತಾನಕ್ಕೆ ಹೋಗುತ್ತೀರಾ? ಅಥವಾ ಇನ್ಸ್ಟಾಗ್ರಾಂ ತೊರೆಯುತ್ತಿದ್ದೀರಾ ಇತ್ಯಾದಿ ಸಾಕಷ್ಟು ಪ್ರಶ್ನೆಗಳನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಇದನ್ನೂ ಓದಿ | CSK ಕುರಿತ ಪೋಸ್ಟ್‌ಗಳನ್ನು ಜಡೇಜಾ ಡಿಲೀಟ್ ಮಾಡಿದ್ದು ಯಾಕಿರಬಹುದು?
ಅದ್ನಾನ್ ಸಮಿ ಅವರು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 2020ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಹಿಂದೆ ತಮ್ಮ ಭಾರಿ ತೂಕವನ್ನು ಇಳಿಸಿಕೊಂಡಿದ್ದರು. ಮಾಲ್ಡೀವ್ಸ್‌ನಲ್ಲಿ ಕುಟುಂಬದೊಂದಿಗೆ ಇರುವ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದೀಗ ಇನ್ಸ್ಟಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವುದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.
ಅದ್ನಾನ್ ಸಮಿ “ಲಕ್ಕಿ: ನೋ ಟೈಮ್ ಫಾರ್ ಲವ್’ (2005), `’ಧಮಾಲ್ (2007)’ ಮತ್ತು ‘ಶೌರ್ಯ’ (2008) ನಂತಹ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿ ಹೆಸರುವಾಸಿಯಾಗಿದ್ದಾರೆ. ಭರ್ ದೋ ಜೊಲಿ ಮೇರಿ (ಭಜರಂಗಿ ಭಾಯಿಜಾನ್), ನೂರ್ ಇ ಖುದಾ ಮತ್ತು ಮೇರಾ ಜಹಾನ್ (ತಾರೆ ಜಮೀನ್ ಪರ್) ಅವರ ಇತರ ಜನಪ್ರಿಯ ಹಾಡುಗಳಾಗಿವೆ. ಹಲವಾರು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ. ಪಾಕಿಸ್ತಾನಿ ಗಾಯಕರಾಗಿದ್ದ ಇವರು 2016ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದಾರೆ.
ಇದನ್ನೂ ಓದಿ | ಲೀನಾ ಅಧಿಕ ಪ್ರಸಂಗತನ; ಶಿವ ಪಾರ್ವತಿ ಪಾತ್ರಧಾರಿಗಳು ಸಿಗರೇಟ್ ಸೇದುವ ಫೋಟೋ ಪೋಸ್ಟ್