Site icon Vistara News

Aero India 2023: ಫೆ.13ರಂದು ವೈಮಾನಿಕ, ರಕ್ಷಣಾ ಕೈಗಾರಿಕೆಗಳ ಸಿಇಒಗಳ ದುಂಡು ಮೇಜಿನ ಸಭೆ; ರಾಜನಾಥ್ ಸಿಂಗ್ ಅಧ್ಯಕ್ಷತೆ

#image_title

ಬೆಂಗಳೂರು: ಏರೋ ಇಂಡಿಯಾ-2023 ವೈಮಾನಿಕ (Aero India 2023) ಪ್ರದರ್ಶನ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಂದು ನಗರದ ಯಲಹಂಕ ವಾಯುನೆಲೆಯಲ್ಲಿ ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗಳ ದುಂಡು ಮೇಜಿನ ಸಭೆ’ ಆಯೋಜಿಸಲಾಗಿದೆ.

“ಆಗಸವೇ ಮಿತಿಯಲ್ಲ: ಗಡಿಗಳನ್ನು ಮೀರಿದ ಅವಕಾಶಗಳು” ಎಂಬ ಘೋಷವಾಕ್ಯದ ವೇದಿಕೆಯು ‘ಮೇಕ್-ಇನ್ ಇಂಡಿಯಾ’ ಅಭಿಯಾನವನ್ನು ಉತ್ತೇಜಿಸಲಿದೆ ಮತ್ತು ‘ಸುಲಭದ ವ್ಯಾಪಾರ ನಡೆಸುವ’ ದೃಷ್ಟಿಯಿಂದ ಉದ್ಯಮ ಪಾಲುದಾರರು ಮತ್ತು ಸರ್ಕಾರದ ನಡುವೆ ಹೆಚ್ಚು ಉತ್ಕೃಷ್ಠ ಸಂವಾದಕ್ಕೆ ಅಡಿಪಾಯ ಹಾಕುವ ನಿರೀಕ್ಷೆಯಿದೆ. ‘ಮೇಕ್-ಇನ್-ಇಂಡಿಯಾ ಫಾರ್ ದಿ ವರ್ಲ್ಡ್’ಗೆ ವೇದಿಕೆಯಾಗಲಿರುವ ಏರೋ ಇಂಡಿಯಾ 2023, ಭಾರತದಲ್ಲಿ ಉತ್ಪಾದನೆಗೆ ಒಇಎಂಗಳಿಗೆ ಪೂರಕ ವೇದಿಕೆಯನ್ನು ಒದಗಿಸುತ್ತದೆ.

ಬೋಯಿಂಗ್, ಲಾಕ್ಹೀಡ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೈಬರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಮಿಲಿಟರಿ ಇಂಡಸ್ಟ್ರೀಸ್ ಜನರಲ್ ಅಥಾರಿಟಿ (ಜಿಎಎಂಐ) ನಂತಹ ಜಾಗತಿಕ ಹೂಡಿಕೆದಾರರು ಸೇರಿ 26 ದೇಶಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಮತ್ತು ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Highway Projects: ಕರ್ನಾಟಕದ 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹3,582 ಕೋಟಿ ನೀಡಿದ ಕೇಂದ್ರ ಸರ್ಕಾರ: ನಿತಿನ್‌ ಗಡ್ಕರಿ ಘೋಷಣೆ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಬಿಇಎಂಎಲ್ ಲಿಮಿಟೆಡ್, ಮಿಶ್ರಾ ಧಾತು ನಿಗಮ ನಿಯಮಿತ ಮತ್ತಿತರ ದೇಶೀಯ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಭಾರತದ ಪ್ರಮುಖ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಕಂಪನಿಗಳಾದ ಲಾರ್ಸೆನ್ ಮತ್ತು ಟೂಬ್ರೋ, ಭಾರತ್ ಫೋರ್ಜ್, ಡೈನಾಮಿಟಿಕ್ ಟೆಕ್ನಾಲಜೀಸ್, ಬ್ರಹ್ಮೋಸ್ ಏರೋಸ್ಪೇಸ್ ಸೇರಿ ಮತ್ತಿತರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

ಇದು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗಾಗಿ ಕೈಗಾರಿಕೆಗಳನ್ನು ತೊಡಗಿಸಿಕೊಳ್ಳುತ್ತದೆ. ಭಾರತವನ್ನು ವಾಣಿಜ್ಯ ಉತ್ಪಾದನಾ ಕೇಂದ್ರವಾಗಿ ಮಾಡಲು ಮತ್ತು ಜಾಗತಿಕ ಉತ್ಪನ್ನ ಬೆಂಬಲಕ್ಕೆ ಆಧಾರವಾಗಿಸುತ್ತದೆ. ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಯನ್ನು ಶೋಧಿಸುವಾಗ ಮತ್ತು ಕೈಗಾರಿಕೆಗಳು ಕೇವಲ ‘ಮೇಕ್ ಇನ್ ಇಂಡಿಯಾ’ ಆದರೆ ಸಾಲದು ‘ಮೇಕ್ ಇನ್ ಇಂಡಿಯಾ ಫಾರ್ ದಿ ವಲ್ಡ್‌’ ಆಗುವ ಅವಕಾಶ ಸೃಷ್ಟಿಯಾಗಲಿದೆ.

ಭಾರತವು ಜಾಗತಿಕನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಹೂಡಿಕೆಗಳು ಮತ್ತು ವ್ಯಾಪಾರಕ್ಕಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಸ್ಥಿರ ವಾತಾವರಣವನ್ನು ಇಡೀ ವಿಶ್ವಕ್ಕೆ ಒದಗಿಸುತ್ತದೆ. ಭಾರತದ ಮೇಲೆ ಜಗತ್ತಿನ ಗಮನವು ಹೆಚ್ಚಾಗುತ್ತಿರುವುದರಿಂದ ವ್ಯಾಪಾರಕ್ಕೆ ಪೂರಕ ವ್ಯವಸ್ಥೆ ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಸ್ಪರ್ಧಾತ್ಮಕತೆಯ ಅನ್ವೇಷಣೆಗೆ ಕಾರಣವಾಗಿದೆ.

ಭಾರತವು ಇಂದು ವಿಶ್ವದ 3ನೇ ಅತಿದೊಡ್ಡ ಮಿಲಿಟರಿಯನ್ನು ಹೊಂದಿದೆ. ಮುಂದಿನ 5-7 ವರ್ಷಗಳಲ್ಲಿ ನೌಕಾಪಡೆ (ಫ್ಲೀಟ್) ಆಧುನೀಕರಣಕ್ಕಾಗಿ 130 ಶತಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಲು ಸರ್ಕಾರ ಯೋಜಿಸಿದೆ. ಪರವಾನಗಿಗಳನ್ನು ತೆಗೆದುಹಾಕುವುದು, ನಿಯಂತ್ರಣಗಳನ್ನು ತೆಗೆದುಹಾಕುವುದು, ಆಮದು ಬದಲಿಗಾಗಿ ಧನಾತ್ಮಕ ಸ್ವದೇಶೀಕರಣ ಪಟ್ಟಿಗಳು, ರಫ್ತು ಉತ್ತೇಜನ, ಎಫ್‌ಡಿಐ ಉದಾರೀಕರಣ ಮತ್ತು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆಯಂತಹ ನೀತಿ ಉಪಕ್ರಮಗಳ ಸರಣಿಯ ಮೂಲಕ ಸರ್ಕಾರವು ಭಾರತೀಯ ರಕ್ಷಣಾ ಉತ್ಪಾದನಾ ಪೂರಕ ವ್ಯವಸ್ಥೆಯಲ್ಲಿ “ಸ್ವಾವಲಂಬನೆ” ಸಾಧಿಸಲು ನಿರ್ಧರಿಸಿದೆ.

ಜಾಗತಿಕ ವೈಮಾನಿಕ ಉದ್ಯಮದಲ್ಲಿ ಒಂದು ಪ್ರಮುಖ ಪ್ರದರ್ಶನವಾದ ಏರೋ ಇಂಡಿಯಾ ಭಾರತದ ಅತ್ಯಂತ ಪ್ರಮುಖ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನವಾಗಿದೆ, ಇದು ಯಲಹಂಕದ ವಾಯುನೆಲೆಯ ಒಟ್ಟು 35,000 ಚದರ ಮೀಟರ್ ಪ್ರದೇಶದಲ್ಲಿ ಎರಡು ವರ್ಷಕ್ಕೊಮ್ಮೆ (ದೈವಾರ್ಷಿಕವಾಗಿ) ನಡೆಯುತ್ತದೆ. 1996ರಲ್ಲಿ ಆರಂಭವಾದ ಪ್ರದರ್ಶನ ಈ ವರ್ಷ 14ನೇ ಆವೃತ್ತಿಯದ್ದಾಗಿದೆ. ಇದು ಉದ್ಯಮಕ್ಕೆ ಅದರ ಸಾಮರ್ಥ್ಯಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಅನನ್ಯ ಅವಕಾಶ ಒದಗಿಸುತ್ತದೆ. ಏರೋ ಶೋನ ಈ ಆವೃತ್ತಿಯಲ್ಲಿ, ವಿಶ್ವಾದ್ಯಂತ ಒಟ್ಟು 731 ಪ್ರದರ್ಶಕರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Tech layoffs : ಇ-ಕಾಮರ್ಸ್‌ ಇಬೇ ಕಂಪನಿಯಲ್ಲಿ 500 ಉದ್ಯೋಗಿಗಳ ವಜಾ

ಐದು ದಿನಗಳ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಕಂಪನಿಗಳ ಬೃಹತ್ ಪ್ರದರ್ಶನ ಮತ್ತು ವ್ಯಾಪಾರ ಮೇಳದೊಂದಿಗೆ ವಿಮಾನಗಳ ವೈಮಾನಿಕ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಈ ವರ್ಷದ ಪ್ರದರ್ಶನದಲ್ಲಿ ಹೆಚ್ಚಿನ ಪ್ರಮಾಣದ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗುವ ನಿರೀಕ್ಷೆ ಇದೆ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಚಿಂತಕರ ತಂಡಗಳು, ತಜ್ಞರು, ಪ್ರಮುಖ ಏರೋಸ್ಪೇಸ್ ಕಂಪನಿಗಳು ಮತ್ತು ಜಾಗತಿಕ ನಾಯಕರು ಭಾಗಿಯಾಗಲಿದ್ದಾರೆ.

ಭಾರತವು ಭರವಸೆಯ ವೈಮಾನಿಕ ಮತ್ತು ರಕ್ಷಣಾ ಉತ್ಪಾದನಾ ತಾಣವಾಗಿ ಹೊರಹೊಮ್ಮುತ್ತಿರುವುದರಿಂದ, ಜಾಗತಿಕ ಕಂಪನಿಗಳು ಪರಸ್ಪರ ಗುರಿಗಾಗಿ ಹೊಸ ಪಾಲುದಾರಿಕೆಗಳನ್ನು ಕಂಡುಕೊಳ್ಳುತ್ತಿವೆ. ಏರೋ ಇಂಡಿಯಾ ಪ್ರದರ್ಶನವು ವೈಮಾನಿಕ ಮತ್ತು ರಕ್ಷಣಾ ಉದ್ಯಮಗಳೊಳಗಿನ ಸಂಸ್ಥೆಗಳಿಗೆ ಈ ವಲಯದ ಸದ್ಯದ ಮತ್ತು ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಪಾಲುದಾರಿಕೆಗಳನ್ನು ಹೊಂದಲು ಹಲವು ವೇದಿಕೆಗಳನ್ನು ಒದಗಿಸುತ್ತದೆ.

Exit mobile version