Site icon Vistara News

Aero India 2023: ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ ಏರೋ ಇಂಡಿಯಾ ಪ್ರದರ್ಶನ; ಪಿಎಂ ಮೋದಿ ವಿಶೇಷ ಆಕರ್ಷಣೆ!

#image_title

ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ. ಯಲಹಂಕ ವಾಯುನೆಲೆಯಲ್ಲಿ (Aero India 2023) ಫೆ.13ರ ಸೋಮವಾರದಿಂದ 5 ದಿನಗಳ ಕಾಲ ಯುದ್ಧ ವಿಮಾನಗಳು ಆಗಸದಲ್ಲಿ ಹಾರಾಡ ನಡೆಸಲಿದೆ.

14ನೇ ಆವೃತ್ತಿಯ ಈ ಏರೋ ಇಂಡಿಯಾ ಶೋನಲ್ಲಿ 41 ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ. ಅಲ್ಲದೇ, ವೈಮಾನಿಕ ಪ್ರದರ್ಶನ ನೀಡಲು ಕೊನೆಯ ಹಂತದ ತಾಲೀಮು ನಡೆದಿದೆ. ಏರೋ ಇಂಡಿಯಾ ಉದ್ಘಾಟನೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಫೆ.13ರಿಂದ 17ರ ವರೆಗೆ ಏರ್ ಶೋ ನಡೆಯಲಿದೆ.

ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದಲ್ಲಿ ಹಲವು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದ್ದವು. ಆಗಸದಲ್ಲಿ ತೇಜಸ್, ಡಕೋಟಾ, ರುದ್ರ, ತ್ರಿಶೂಲ್ ವಿಮಾನಗಳು ರಿಹರ್ಸಲ್ ಮಾಡಿ ಜನರ ಮನಗೆದ್ದವು. ರಿಹರ್ಸಲ್ ದಿನವೇ ಆಕಾಶದಲ್ಲಿ‌ ಚಿತ್ತಾರ ಬಿಡಿಸಿ ಸಾರ್ವಜನಿಕರನ್ನು ಆಕರ್ಷಿಸಿದ್ದವು.

ಕೋವಿಡ್‌ನಿಂದ ಮಂಕಾಗಿದ್ದ ಏರೋ ಇಂಡಿಯಾ ಶೋ

ಕಳೆದ ಎರಡು ಬಾರಿ ಕೊರೊನಾ ಹಿನ್ನೆಲೆ 3 ದಿನ ಮಾತ್ರ ಏರ್​ ಶೋ ನಡೆಸಲಾಗಿತ್ತು. ಆದರೆ ಈ ವರ್ಷ ಎಂದಿನಂತೆ 5 ದಿನಗಳ ಕಾಲ ಏರ್ ಶೋ ಕಾರ್ಯಕ್ರಮ ನಡೆಯಲಿದೆ.‌ ಸಾರ್ವಜನಿಕರಿಗೆ ಯಾವುದೇ ರೀತಿಯ ನಿರ್ಭಂಧವಿಲ್ಲ. ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆಗೆ ಅಧಿಕೃತ ವೆಬ್​ಸೈಟ್​ ಮೂಲಕ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ.

ಬ್ಯುಸಿನೆಸ್ ಟಿಕೆಟ್​ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದ್ದರೆ, ವಿದೇಶೀಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಅವಕಾಶ ಕಲ್ಪಿಸುವ ಟಿಕೆಟ್​ಗೆ ₹ 2,500 ಶುಲ್ಕವಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ ₹ 1,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲು 3 ದಿನ ಉದ್ಯಮಕ್ಕೆ ಸಂಬಂಧಿಸಿದವರಿಗೆ ಮಾತ್ರವೇ ಪ್ರವೇಶ ಇರುತ್ತದೆ. ಕೊನೆಯ 2 ದಿನ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಸಾರಿಗೆ ವ್ಯವಸ್ಥೆ

ಏರೋ ಇಂಡಿಯಾ ವೀಕ್ಷಣೆಗೆ ಬರುವವರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಸಿ ಮತ್ತು ನಾನ್ ಎಸಿ ಬಸ್‌ಗಳ ಸೇವೆಯನ್ನು ಒದಗಿಸಲಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರ್ಕೆಟ್, ಶಿವಾಜಿನಗರ, ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್ ಹಾಗೂ ಯಲಹಂಕ (ಎನ್‌ಇಎಸ್), ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್‌ಫ್ಯಾಕ್ಟರಿ ಹಾಗೂ ಯಶವಂತಪುರ ನಿಲ್ದಾಣದಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: Mind Detox: ಭಾವನೆಗಳೂ ಗಂಭೀರ ಸ್ವರೂಪದ ಕಾಯಿಲೆ ತರುತ್ತವಂತೆ!; ಹೆದರಬೇಡಿ, ಮನಸನ್ನೊಮ್ಮೆ ಡಿಟಾಕ್ಸ್‌ ಮಾಡಿ

Exit mobile version