Site icon Vistara News

Aero India 2023 : ಒಂದು ಪೂರ್ಣ ವಿಮಾನವನ್ನು ರಾಜ್ಯದಲ್ಲೇ ನಿರ್ಮಿಸುವ ಗುರಿ ಶೀಘ್ರ ನನಸು ಎಂದ ಸಿಎಂ ಬೊಮ್ಮಾಯಿ

Bommai rajanath

#image_title

ಬೆಂಗಳೂರು: ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿ ಬೆಳೆಯುತ್ತಿದೆ. ಒಂದು ವಿಮಾನವನ್ನು ಪರಿಪೂರ್ಣವಾಗಿ‌ ಇಲ್ಲೇ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು, ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಈ ಕನಸು ಶೀಘ್ರವೇ ನನಸಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶನಿವಾರ (ಫೆ.೧೨) ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ರಾಜ್ಯದಲ್ಲಿ ಏರೊಸ್ಪೇಸ್ ನೀತಿ ಜಾರಿಯಾಗಿದೆ. ರಕ್ಷಣಾ ಪಾರ್ಕ್‌ನ ಮೊದಲ ಹಂತ ಪೂರ್ಣಗೊಂಡಿದ್ದು, 2ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೋ ನಡೆಸಲು ಅತ್ಯಂತ ಸೂಕ್ತ ಸ್ಥಳವಾಗಿದ್ದು ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದನ್ನು ಪ್ರತಿನಿಧಿಸುತ್ತದೆ ಎಂದರು.

ಏರೊ ಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್‌ಡಿಒ ಎಲ್ಲವೂ ಆರ್ ಆಂಡ್ ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ.1960ರ ದಶಕದಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. 1960ರಲ್ಲಿ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ. 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ ಎಂದರು. ಹೀಗಾಗಿ ಒಂದು ಪೂರ್ಣ ಪ್ರಮಾಣದ ವಿಮಾನ ನಿರ್ಮಾಣ ಇಲ್ಲಿ ಸಾಧ್ಯವಿದೆ ಎಂದರು.

ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ

ಏರ್‌ ಶೋಗೆ ಆತಿಥ್ಯ ವಹಿಸುವುದು ರಾಜ್ಯಕ್ಕೆ ಅಭ್ಯಾಸವಾಗಿ ಹೋಗಿದೆ. ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ ಹಾಗೂ ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು ಎರಡು ವರ್ಷಗಳ ಹಿಂದೆ ಏರ್ ಶೋ ಯಶಸ್ವಿಯಾಗಿ ಜರುಗಿತು. ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಇದು ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ಅತಿ ಹೆಚ್ಚು ವಿದೇಶಿ ರಕ್ಷಣಾ ಮಂತ್ರಿಗಳು, ಏರ್ ಪೋರ್ಸ್ ಸಿಇಒ ಗಳು, 35000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ, 67 ವಸ್ತುಪ್ರದರ್ಶನ , 600 ರಿಂದ 809 ಗೆ ಪ್ರದರ್ಶನಗಳು, 98 ವಿದೇಶಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಒಪ್ಪಂದಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

ವಾಯುಪಡೆಯ ಬಲವರ್ಧನೆ
ವಾಯುಪಡೆಯ ತಂತ್ರಜ್ಞಾನ, ಸಾಮರ್ಥ್ಯ, ಮಾನವ ಸಂಪನ್ಮೂಲ ಬಲಪಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ ನಾಥ್ ಸಿಂಗ್ ಅವರ ನಾಯಕತ್ವದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ, ತಂತ್ರಜ್ಞಾನ ಮೇಲ್ದರ್ಜೆಗೇರುವಲ್ಲಿ ಭಾರತ ಆತ್ಮನಿರ್ಭರವಾಗುತ್ತಿದೆ. ನಮ್ಮ ರಕ್ಷಣಾ ಉಪಕರಣಗಳು ಶೇ 75ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು‌. ಈಗ ರಪ್ತು ಮಾಡುತ್ತಿದ್ದೇವೆ‌ ಎಂದರು ಬೊಮ್ಮಾಯಿ

ಕೇಂದ್ರ ರಕ್ಷಣ ಇಲಾಖೆ ರಾಜ್ಯ ಸಚಿವ ಅಜಯ್ ಭಟ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗಿರಿಧರ್ , ಎ. ಸಿ.ಎಸ್ ರಮಣ ರೆಡ್ಡಿ, ನಟರಾಜನ್, ಅನುರಾಗ್ ಬಾಜಪೇಯಿ ಉಪಸ್ಥಿತರಿದ್ದರು.

ಇದನ್ನೂ ಓದಿ : Modi In Bangalore: ರಾಜ ಭವನದಲ್ಲಿ ಮೋದಿ ಔತಣಕೂಟ; ಯಶ್‌, ರಿಷಬ್‌ ಶೆಟ್ಟಿ ಸೇರಿ ಹಲವರು ಭಾಗಿ

Exit mobile version