ಚಿಕ್ಕಬಳ್ಳಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ವಿವಾದ, ಗಲಾಟೆ ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಕಿಡಿಗೇಡಿಗಳು ಉದ್ದಟತನವನ್ನು ಪ್ರದರ್ಶಿಸಿದ್ದಾರೆ. ಕರ್ನಾಟಕದ ಟಿಟಿ ವಾಹನದಲ್ಲಿ ಕನ್ನಡ ಧ್ವಜವನ್ನು (Kannada Flag) ಕಟ್ಟಲಾಗಿದೆ ಎಂಬ ಕಾರಣಕ್ಕೆ ಕಲ್ಲು ತೂರಾಟ ನಡೆಸಿ, ಕ್ಯಾತೆ ತಗೆದಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಾಲಾಧಾರಿ ಭಕ್ತರು ಟಿಟಿ ವಾಹನದ ಮೂಲಕ ತಮಿಳುನಾಡಿನ ಮಧುರೈನ ವಿವಿಧ ದೇವಸ್ಥಾನಗಳನ್ನು ವೀಕ್ಷಿಸಲು ಬಂದಿದ್ದರು. ಈ ವೇಳೆ ಟಿಟಿ ವಾಹನಕ್ಕೆ ಕನ್ನಡದ ಬಾವುಟವನ್ನು ಕಟ್ಟಲಾಗಿತ್ತು. ಇದನ್ನು ಕಂಡ ಕೆಲ ಕಿಡಿಗೇಡಿಗಳಿಂದ ಕರ್ನಾಟಕದ ಟಿಟಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಜತೆಗೆ ಸ್ಥಳಕ್ಕೆ ಬಂದು ವಾಗ್ವಾದ ನಡೆಸಿದ್ದಾರೆ. ಕನ್ನಡ ಬಾವುಟವನ್ನು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಬೇರೆ ರಾಜ್ಯದಿಂದ ಬಂದವರು ಎಂಬುದನ್ನೂ ಲೆಕ್ಕಿಸದೆ ಗಲಾಟೆಗೆ ನಿಂತಿದ್ದರು. ನಮಗೆ ರಕ್ಷಣೆ ಬೇಕಿದೆ ಎಂದು ಕನ್ನಡಿಗರು ಮನವಿ ಮಾಡಿದ್ದಾರೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಶಬರಿ ಮಲೆಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಮಧುರೈಗೆ ಬಂದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ | Border Dispute | ಮಹಾರಾಷ್ಟ್ರದಿಂದ ಕನ್ನಡಿಗರನ್ನು ಓಡಿಸುತ್ತೇವೆ: ಎಂಎನ್‌ಎಸ್ ಮುಖಂಡನ ಉದ್ಧಟತನ