ಕಲಬುರಗಿ: ಮಳಖೇಡದ ಉತ್ತರಾದಿ ಮಠ ಹಾಗು ಮಂತ್ರಾಲಯದ ರಾಯರ ಮಠ ಎರಡು ಪುಣ್ಯಸ್ಥಳಗಳು ಕೋಟ್ಯಂತರ ಭಕ್ತ ಗಣವನ್ನು ಹೊಂದಿವೆ. ಆದರೆ ಇದೀಗ ಆ ಎರಡು ಮಠಗಳ ನಡುವೆ ಶ್ರೀ ಜಯತೀರ್ಥರ ಮೂಲ ಬೃಂದಾವನ ಕುರಿತು ವಿವಾದ ಮತ್ತೆ ಭುಗಿಲೆದ್ದಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠಕ್ಕೆ ಕೋಟಿ ಕೋಟಿ ಭಕ್ತರಿದ್ದಾರೆ. ಆದರೆ, ಇದೇ ಉತ್ತರಾದಿ ಮಠದಲ್ಲಿನ ಜಯತೀರ್ಥರ ಬೃಂದಾವನದ ಬಗ್ಗೆ ರಾಯರ ಮಠದ ಭಕ್ತಗಣ ಅಪಸ್ವರ ಎತ್ತಿದೆ. ಮೂಲ ಬೃಂದಾವನ ಮಳಖೇಡದಲ್ಲಿ ಅಲ್ಲ ಆನೆಗೊಂದಿಯ ನವ ವೃಂದಾವನದಲ್ಲಿದೆ, ಅದುವೇ ಶ್ರೇಷ್ಠ ಎಂಬ ಮಾತು ಎಲ್ಲೆಡೆ ಚರ್ಚೆ ಆಗುತ್ತಿದೆ.
ಇದನ್ನು ಓದಿ | ರಾಯರ ಸನ್ನಿಧಿಯಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ವರ್ಧಂತಿ ಮಹೋತ್ಸವ
ಸದ್ಯ ಈ ಬಗ್ಗೆ ಮಳಖೇಡದ ಭಕ್ತರು ಪ್ರತಿಕ್ರಿಯಿಸಿದ್ದು, ಉತ್ತರಾದಿ ಮಠಕ್ಕೆ 600 ವರ್ಷಗಳ ಇತಿಹಾಸವಿದೆ. ಮಾತ್ರವಲ್ಲ ಮೂಲ ಬೃಂದಾವನ ಮಳಖೇಡದಲ್ಲಿದೆ ಎನ್ನುವುದು ಇತಿಹಾಸದಲ್ಲಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನ್ಯಾಯಸುಧಾ ಮಹೋತ್ಸವ ಕೂಡ ನಡೆದಿದೆ. ಇಷ್ಟೆಲ್ಲಾ ಸಾಕ್ಷಿ ಇದ್ದರೂ ಕೆಲವರು ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉತ್ತರಾಧಿ ಮಠದ ಭಕ್ತರು ಹೇಳಿದ್ದಾರೆ.
ಒಟ್ಟಾರೆ ರಾಯರ ಮಠ ವರ್ಸಸ್ ಉತ್ತರಾದಿ ಮಠ ಟಾಕ್ ಫೈಟ್ ಈ ಹಿಂದೆ ಕೆಲಕಾಲ ನಡೆದಿತ್ತು. ಇದೀಗ ಮತ್ತೆ ಶುರುವಾಗಿದೆ.