Site icon Vistara News

Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

Aggriculture activity and APP

ಬೆಂಗಳೂರು: ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಏರಿಳಿತ, ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈಗ ರಾಜ್ಯ ಸರ್ಕಾರ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ತಂತ್ರಜ್ಞಾನಾಧಾರಿತ ಕೃಷಿ ಆ್ಯಪ್ (Agriculture APP) ತರಲು ಮುಂದಾಗಿದೆ. ರಾಜ್ಯದ ರೈತರಿಗೆ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸಲು ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅಪ್ಲಿಕೇಶನ್ (ಆ್ಯಪ್) (Artificial Intelligence (AI) based application) ಅನ್ನು ಪ್ರಾರಂಭಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದೆ.

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅಪ್ಲಿಕೇಶನ್‌ನಲ್ಲಿ ಯಾವೆಲ್ಲ ಫೀಚರ್‌ಗಳು ಇರಲಿವೆ ಎಂಬ ಬಗ್ಗೆ ಸರ್ಕಾರದ ಕಡೆಯಿಂದ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಆದರೆ, ಇದರ ಮೂಲಕ ಹವಾಮಾನ ಸ್ಥಿತಿ ಸೇರಿದಂತೆ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಲು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Commission Politics : 40 ಪರ್ಸೆಂಟ್‌ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ

ಸ್ಥಾಪನೆಯಾಗಿದೆ ಏಕೀಕೃತ ಸಹಾಯವಾಣಿ ಕೇಂದ್ರ

ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿ.ಎಂ.ಕಿಸಾನ್, ಕೆ.ಕಿಸಾನ್, ಬೆಳೆ ಸಮೀಕ್ಷೆ ಮತ್ತಿತರ ವಿಷಯಗಳಲ್ಲಿ ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆಯಲು ವಿವಿಧ ದೂರವಾಣಿ ಸಂಖ್ಯೆಗಳು ಇವೆ. ಹೀಗೆ ಒಂದೊಂದು ವಿಭಾಗಗಳಿಗೆ ಒಂದೊಂದು ಸಂಖ್ಯೆ ಇದ್ದರೆ ರೈತರಿಗೂ ಕಷ್ಟವಾಗುತ್ತದೆ ಎಂಬ ನಿಟ್ಟಿನಲ್ಲಿ ಸರ್ಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ರೈತರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಮಾಹಿತಿ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಹಿಂದೆ ವಿವಿಧ ಯೋಜನೆಗಳಿಗೆ ಇದ್ದ 8 ಪ್ರತ್ಯೇಕ ಸಹಾಯವಾಣಿ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಸಹಾಯವಾಣಿ ಕರೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ನೂತನ ಸಹಾಯವಾಣಿ ಸಂಖ್ಯೆ 1800-425-3553 ಕ್ಕೆ ಕರೆ ಮಾಡಿ ರೈತರು ಈ ಎಲ್ಲ ವಿಷಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಕೃಷಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಭೀಮಾ ಫಲ್ಸ್ ಎಂಬ ಬ್ರ್ಯಾಂಡ್ ತೊಗರಿ ಬೇಳೆ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಭೌಗೋಳಿಕ ಸೂಚ್ಯಂಕ (ಜಿಯೋ ಟ್ಯಾಗ್) ಪಡೆದಿರುವ “ಭೀಮಾ ಫಲ್ಸ್” ಎಂಬ ಬ್ರ್ಯಾಂಡ್‍ನ ಗುಲ್ಬರ್ಗ ತೊಗರಿ ಬೇಳೆ ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದೆ. ಹೀಗಾಗಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಇದನ್ನೂ ಓದಿ: Karnataka Politics : ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!

ಈ ಸಹಾಯವಾಣಿಗೆ ಕರೆ ಮಾಡಿ ಬೆಳೆ ಸಮೀಕ್ಷೆ ಬಗ್ಗೆ ತಿಳಿಯಿರಿ

ಬೆಳೆ ಸಮೀಕ್ಷೆ ಕುರಿತು ರೈತರು ನೂತನ ಸಹಾಯವಾಣಿ ಸಂಖ್ಯೆ 1800-425-3553ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ರಾಜ್ಯದಲ್ಲಿ 2017ಕ್ಕೂ ಮುಂಚಿತವಾಗಿ ಬೆಳೆ ವಿಸ್ತೀರ್ಣ ಅಂಕಿ ಅಂಶಗಳ ಅಂದಾಜು ಕಾರ್ಯವನ್ನು ಅಧಿಕಾರಿಗಳು ಭೌತಿಕವಾಗಿ ಮಾಡುತ್ತಿದ್ದರಿಂದ ಸಮಯಕ್ಕೆ ಸರಿಯಾಗಿ ಸರ್ವೆ / ಹಿಸ್ಸಾವಾರು ಬೆಳೆಯ ಮಾಹಿತಿಯ ದಾಖಲೆಯು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇ-ಆಡಳಿತ ಇಲಾಖಾ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಜಿ.ಪಿ.ಎಸ್. ಆಧಾರಿತ ಮೊಬೈಲ್ ತಂತ್ರಾಂಶವನ್ನು ಬಳಸಿ ಸರ್ವೆ ನಂಬರ್ / ಹಿಸ್ಸಾವಾರು ಬೆಳೆಯ ಮಾಹಿತಿಯನ್ನು ದಾಖಲಿಸುವ ಕಾರ್ಯ ಚಾಲ್ತಿಯಲ್ಲಿ ಎಂಬ ವಿಷಯವನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

Exit mobile version