Site icon Vistara News

Air compressor explosion : ಏರ್ ಕಂಪ್ರೆಸ್ಸರ್ ಸ್ಫೋಟಗೊಂಡು ಕಾರ್ಮಿಕ ಸಾವು

tyre blast in uppinangady

ಮಂಗಳೂರು: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಟಯರ್ ರಿಸೋಲ್‌ ಸಂಸ್ಥೆಯಲ್ಲಿ ಏರ್ ಕಂಪ್ರೆಸ್ಸರ್ ಸ್ಫೋಟಗೊಂಡು (Air compressor explosion) ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆಲಂಕಾರು ನಿವಾಸಿ ರಾಜೇಶ್ ಪೂಜಾರಿ (40) ಮೃತ ದುರ್ದೈವಿ.

ಉಪ್ಪಿನಂಗಡಿಯ ಟಯರ್‌ ರಿಸೋಲ್‌ ಸಂಸ್ಥೆಯಲ್ಲಿ ಬುಧವಾರ (ಜ.೧೮) ಮಧ್ಯಾಹ್ನ ಏರ್‌ ಕಂಪ್ರೆಸ್ಸರ್‌ ಸ್ಫೋಟಗೊಂಡಿದೆ. ಇದರಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದ ರಾಜೇಶ್‌ ತೀವ್ರವಾಗಿ ಗಾಯಗೊಂಡಿದ್ದರು.

ಗಾಯಗೊಂಡ ರಾಜೇಶ್‌ರನ್ನು ತಕ್ಷಣವೇ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Election Commission | ಫೆಬ್ರವರಿ 16 ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್, ಮೇಘಾಲಯ ಎಲೆಕ್ಷನ್, ಮಾರ್ಚ್ 2ರಂದು ರಿಸಲ್ಟ್

Exit mobile version