ಹಾವೇರಿ: ವಿಧಾನಸಭಾ ಚುನಾವಣಾ (Karnataka Election 2023) ಕಣ ರಂಗೇರುತ್ತಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಫೈನಲ್ ಮಾಡುವ ಕಾರ್ಯ ನಡೆಯುತ್ತಿದೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡುತ್ತಿರುವ ಶಿಗ್ಗಾಂವಿ ಕ್ಷೇತ್ರವು ಈಗ ಎಲ್ಲರ ಕೇಂದ್ರಬಿಂದುವಾಗಿದೆ. ಈ ಬಾರಿ ಇಲ್ಲಿ ಟಫ್ ಫೈಟ್ ಕೊಡಲು ಸಿದ್ಧವಾಗಿರುವ ಕಾಂಗ್ರೆಸ್, ಪಂಚಮಸಾಲಿ ಸಮುದಾಯದ ವಿನಯ್ ಕುಲಕರ್ಣಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿದೆ. ಈ ಬಗ್ಗೆ ಬಂಡಾಯ ಎದ್ದಿದ್ದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಣ್ಣಗಾಗಿದ್ದಾರೆ. ಅಲ್ಲದೆ, ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಮೈನಾರಿಟಿ ಕೋಟಾದಲ್ಲಿ ನಾನು ನಾಲ್ಕು ಬಾರಿ ಚುನಾವಣೆಗೆ ನಿಂತಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಹಿಂದು ಬಾಂಧವರು ನನಗೆ ಮತ ಹಾಕಿದ್ದಾರೆ. ಈ ಬಾರಿ ನೀವು ಸ್ಪರ್ಧೆ ಮಾಡೋದು ಬೇಡ. ಪಾರ್ಟಿ ಕೆಲಸ ಮಾಡಿ ಎಂದು ದೆಹಲಿ ಹೈಕಮಾಂಡ್‌ನವರು ಹೇಳಿದ್ದಾರೆ. ಪಕ್ಷ ಎಂದಿಗೂ ನಿಮ್ಮನ್ನು ಕೈ ಬಿಡಲ್ಲ ಎಂದಿದ್ದಾರೆ. ಶಿಗ್ಗಾಂವಿ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿಗೆ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ನಾವು ಅವರು ಸೇರಿದರೆ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದಾಗಿ ತಿಳಿಸಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ನವರು ಈ ಬಾರಿ ನನಗೆ ಸ್ಪರ್ಧೆ ಮಾಡುವುದು ಬೇಡ. ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಅಲ್ಲದೆ, ಬಹಳ ದಣಿದಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜಮೀರ್ ಅಹ್ಮದ್ ಸಹ ಕಳಕಳಿಯಿಂದ ಹೇಳಿದ್ದಾರೆ. ಹೈಕಮಾಂಡ್ ಮಾತನ್ನು ಶಿರಸಾ ಪಾಲಿಸುವೆ ಎಂದು ಹೇಳಿದರು.
ಇದನ್ನೂ ಓದಿ: Urigowda Nanjegowda : ಕತ್ತಿ ಹೋಯ್ತು ಬಂದೂಕು ಬಂತು; ಇವರೇ ನಿಜವಾದ ಉರಿ, ನಂಜೇಗೌಡ ಎಂದಿದ್ದಾರೆ ಅಡ್ಡಂಡ ಕಾರ್ಯಪ್ಪ!
ವಿನಯ್ ಕುಲಕರ್ಣಿಗೆ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತೇವೆ ಎಂದು ಹೈಕಮಾಂಡ್‌ನವರು ಹೇಳಿದ್ದಾರೆ. ನಾವು ಅವರು ಸೇರಿದರೆ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಸಲೀಂ ಅಹ್ಮದ್, ಜಮೀರ್, ರಾಯರೆಡ್ಡಿ ಇದ್ದರು. ಆದರೆ, ಆಗ ನಾನು, ಮೈನಾರಿಟಿ ಸಮಾಜಕ್ಕೆ ಟಿಕೆಟ್ ಕೊಡಿ ಎಂದು ಕೇಳಿಕೊಂಡೆ. ಸಲೀಂ ಅಹ್ಮದ್‌ಗೆ ಶಿಗ್ಗಾಂವಿ ಅಭ್ಯರ್ಥಿ ಮಾಡಿ ಎಂದು ಕೇಳಿಕೊಂಡೆ. ಅಲ್ಲಾನ ಆಣೆಗೂ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾಗಿ ಖಾದ್ರಿ ಹೇಳಿದರು.
ಬಿಜೆಪಿ ಬಿ ಟೀಂ ಕಾಂಗ್ರೆಸ್‌ನಲ್ಲಿದೆ. ಆದರೆ, ಸಲೀಂ ಅಹ್ಮದ್ ಶಿಗ್ಗಾಂವಿಯಲ್ಲಿ ಬಿಜೆಪಿಗೆ ಸಪೋರ್ಟ್ ಮಾಡ್ತಾರಾ ಏನು ಎಂದು ಕೇಳಬೇಕು. ಸಲೀಂ ಅಹ್ಮದ್ ಉಮ್ರಾ ಹೋಗಿ ಬಂದಿದ್ದಾರೆ. ಮೀಟಿಂಗ್‌ಗಳಿಗೆ ಖಾದ್ರಿಯನ್ನು ಕರೆಯಬೇಡಿ ಅಂತ ಅವರು ನೀಡಿರುವ ಹೇಳಿಕೆಯ ಸಿಡಿ ನನ್ನ ಬಳಿ ಇದೆ. ನಾನು ಕಳೆದ ಚುನಾವಣೆಗಳಲ್ಲಿ ಬಹಳ ಟಫ್ ಫೈಟ್ ಕೊಟ್ಟಿದ್ದೇನೆ. ಬೊಮ್ಮಾಯಿ ಮುಂದೆ ಖಾದ್ರಿ ವೀಕ್ ಎಂದು ಹೇಳಿದ್ದಾರೆ. ನಾನು ದುರ್ಬಲ ಅಲ್ಲ. ವಿನಯ್ ಕುಲಕರ್ಣಿ ಸಾಹೇಬ್ರಿಗೆ ಟಿಕೆಟ್ ಕೊಟ್ಟರೆ ಅಭ್ಯಂತರ ಇಲ್ಲ. ಆದರೆ, ಮುಸ್ಲಿಂಗೆ ಕೊಡಿ ಅಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Next CM: ಮುಂದಿನ ಸಿಎಂ ನಾನೇ ಎಂದು ಬೊಮ್ಮಾಯಿ ಹೇಳಿದ್ದರಲ್ಲಿ ತಪ್ಪೇನಿದೆ: ಬಿ.ಎಸ್. ಯಡಿಯೂರಪ್ಪ ಹೀಗೆ ಹೇಳಿದ್ದು ಯಾಕೆ?
ವಿನಯ್ ಕುಲಕರ್ಣಿ ಆಗಲಿ, ಸಲೀಂ ಅಹ್ಮದ್ ಆಗಲಿ ಸ್ಪರ್ಧೆ ಮಾಡಿದರೆ ನಾನು ಅವರನ್ನು ಗೆಲ್ಲಿಸಿಕೊಂಡು ಬರಲಿ ಸಿದ್ಧನಿದ್ದೇನೆ. ಆದರೆ, ಬಿಜೆಪಿ ಜತೆ ಇರುವ ಕಲೆಕ್ಷನ್ ಗಿರಾಕಿಗಳಿಗೆ ಟಿಕೆಟ್ ಕೊಟ್ಟರೆ ನಾನು ಕೇಳಲ್ಲ ಎಂದು ಅಜ್ಜಂಪೀರ್ ಖಾದ್ರಿ ಎಚ್ಚರಿಕೆ ನೀಡಿದರು.