Site icon Vistara News

Alcohol price : ಎಣ್ಣೆ ರೇಟ್‌ ಇಳಿಸಿ, ಇಲ್ದಿದ್ರೆ ಬೆಳಗ್ಗೆ-ರಾತ್ರಿ ಫ್ರೀ ನೈಂಟಿ ಕೊಡಿ!

alcohol price hike

ಉಡುಪಿ: ಏ ಮಹದೇವಪ್ಪಾ… ನಿಂಗೂ ಫ್ರೀ.. ನಂಗೂ ಫ್ರೀ.. ಎಂದು ಅಂದು ಹೇಳಿದಂಗೆ ಅಲ್ಲ. ನನ್‌ ಹೆಂಡ್ತಿಗೂ ಫ್ರೀ.. ನಿನ್‌ ಹೆಂಡ್ತಿಗೂ ಫ್ರೀ.. ಕೊನೆಗೆ ಕಾಕಾ ಪಾಟೀಲ್‌ಗೂ ಫ್ರೀ.. ಎಂದು ಹೇಳಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ, ಈಗ ನಮ್ಮ ಗೋಳನ್ನೂ ಕೇಳಿ. ನೀವ್ಯಾಕೆ ನಮಗೂ ಫ್ರೀ ಕೊಡಬಾರದು. ಹೀಗೊಂದು ಮನವಿಯನ್ನು ಮದ್ಯ ಪ್ರಿಯರು ಮಾಡುತ್ತಿದ್ದಾರೆ. ಈಗಾಗಲೇ ಮದ್ಯದ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಇವರಿಗೆ ಈಗ ಇನ್ನು 10 ದಿನದಲ್ಲಿ ಮತ್ತೆ ದರ ಹೆಚ್ಚುತ್ತಿರುವುದು ತಲೆನೋವು ತಂದಿದೆ. ಬೆಲೆ ಹೆಚ್ಚಳದ ಹ್ಯಾಂಗೋವರ್‌ನಿಂದ ಅವರಿಗೆ ಹೊರಬರಲೂ ಆಗುತ್ತಿಲ್ಲ. ಹೀಗಾಗಿ ಎಣ್ಣೆ ರೇಟ್‌ (Alcohol price) ಇಳ್ಸಿ, ಇಲ್ದಿದ್ರೆ ನಮ್ಗೂ ಕೊಡಿ “ನೈಂಟಿ” ಗ್ಯಾರಂಟಿ ಕೊಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ‌

ಉಡುಪಿಯಲ್ಲಿ ಈ ಸಂಬಂಧ ಕೂಲಿ ಕಾರ್ಮಿಕರ ಉಗ್ರ ಪ್ರತಿಭಟನೆ (Workers protest) ನಡೆದಿದ್ದು, ಉಚಿತ ಮದ್ಯ (Free Liquor) ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇಲ್ಲಿನ ಚಿತ್ತರಂಜನ್ ಸರ್ಕಲ್‌ನಲ್ಲಿ ವಿನೂತನ ರೀತಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Aarti for drunkards to be worshipped

ಇದನ್ನೂ ಓದಿ: Alcohol price : ಇನ್ನು ಹತ್ತೇ ದಿನಕ್ಕೆ ಎಣ್ಣೆ ಏಟು; ಹೆಚ್ಚುತ್ತೆ ರೇಟು!

ಇತ್ತೀಚಿನ ಬಜೆಟ್‌ನಲ್ಲಿ ಮದ್ಯದ ಬೆಲೆ ಶೇಕಡಾ 20ರಷ್ಟು ಏರಿಕೆಯಾಗಿದೆ. ಸರ್ಕಾರದ ಉಚಿತ ಯೋಜನೆಗಳಿಗೆ ಹಣ ನಮ್ಮಿಂದಲೇ ಬರುವುದು. ಹೀಗಾಗಿ ನಮಗೆ ಮದ್ಯದ ಬೆಲೆಯನ್ನು ಇಳಿಕೆ ಮಾಡಬೇಕು. ನಾವು ಬಡವರಿದ್ದೇವೆ. ಕಷ್ಟಪಟ್ಟು ದುಡಿದ ದುಡ್ಡನ್ನು ಕುಡಿಯಲೆಂದೇ ಹಾಕಿದರೆ ನಮ್ಮ ಮನೆ ನಿರ್ವಹಣೆ ಹೇಗೆ? ನಮ್ಮ ಕಷ್ಟವನ್ನೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಮತ್ತೆ ಯಾವುದೇ ಕಾರಣಕ್ಕೂ ಮದ್ಯದ ಮೇಲಿನ ದರವನ್ನು ಏರಿಸಬಾರದು. ಈಗಿರುವುದನ್ನೇ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Aarti for drunkards to be worshipped

ಬೆಳಗ್ಗೆ ರಾತ್ರಿ ಉಚಿತ ಗ್ಯಾರಂಟಿ ಕೊಡಿ!

ಮದ್ಯದ ಬೆಲೆ ಇಳಿಸಿ ಇಲ್ಲವೇ ಬೆಳಗ್ಗೆ ನೈಂಟಿ, ಸಂಜೆ ನೈಂಟಿಯನ್ನು ಉಚಿತವಾಗಿ (Free Alcohol) ನೀಡಬೇಕು. ಒಂದು ವೇಳೆ ಸರ್ಕಾರಕ್ಕೆ ಹೀಗೆ ಮಾಡಲು ಆಗದೇ ಹೋದರೆ, ಇಡೀ ರಾಜ್ಯದಲ್ಲಿ ಸಾರಾಯಿಯನ್ನೇ ನಿಷೇಧ ಮಾಡಬೇಕು. ಸರ್ಕಾರಕ್ಕೆ ಆಗದಿದ್ದಲ್ಲಿ ಸಾರಾಯಿಯನ್ನು ಸಂಪೂರ್ಣ ಬಂದ್ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.

Aarti for drunkards to be worshipped

ಹೆಂಡತಿ, ಮಕ್ಕಳಿಗೆ ಹಣ ಕೊಡ್ತೇವೆ!

ನಾವೇನು ಹಣವನ್ನು ವ್ಯರ್ಥ ಮಾಡುವುದಿಲ್ಲ. ನೀವು ನಮಗೆ ಬೆಳಗ್ಗೆ ಮತ್ತು ರಾತ್ರಿ ಒಂದೊಂದು ನೈಂಟಿಗೆ ವ್ಯವಸ್ಥೆ ಮಾಡಿದರೆ ಸಾಕು. ನಾವು ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನೀಡುತ್ತೇವೆ. ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ. ಹೇಗೂ ನಿಮ್ಮ ಶಕ್ತಿ ಯೋಜನೆಯು (Shakti Scheme) ಹೆಂಡತಿಗೆ ಫ್ರೀ ಉಂಟು ಎಂದು ಹೇಳಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಇದನ್ನೂ ಓದಿ: CM Siddaramaiah : ಮಧು ಬಂಗಾರಪ್ಪರನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ!

ಕುಡುಕರಿಗೆ ದೊಡ್ಡ ಸನ್ಮಾನ

ಅಲ್ಲದೆ, ಈ ಪ್ರತಿಭಟನೆ ವೇಳೆ ಕುಡುಕರಿಗೆ ಸನ್ಮಾನವನ್ನೂ (Felicitation to drunkards) ಮಾಡಲಾಗಿದೆ. ರಾಜ್ಯ ಹಾಗೂ ದೇಶವನ್ನು ಸಲುಹುತ್ತಿರುವ ಕುಡುಕರು ಮಹಾನ್‌ ವ್ಯಕ್ತಿಗಳು ಎಂದು ಹೇಳಲಾಗಿದ್ದು, ಅವರಿಗೆ ಹಾರ ಹಾಕಿ ಸನ್ಮಾನ ಮಾಡಲಾಗಿದೆ. ಅಲ್ಲದೆ, ದೊಡ್ಡ ತಟ್ಟೆ ಹಿಡಿದು ಆರತಿ ಎತ್ತಿ ಗೌರವಾರ್ಪಣೆಯನ್ನೂ ಸಲ್ಲಿಸಲಾಗಿದೆ. ಜತೆಗೆ ಎಣ್ಣೆ ಬಾಟಲಿಗೂ ಹೂವು ಹಾಕಿ ಸನ್ಮಾನ ಮಾಡಲಾಗಿದೆ.

Exit mobile version