Site icon Vistara News

Drivers hungama | ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕ: ಭಯಗೊಂಡ ಪ್ರಯಾಣಿಕರಿಂದ ತೀವ್ರ ತರಾಟೆ

Bus tharate

ಉಡುಪಿ: ಎಲ್ಲ ಸರಿ ಇದ್ದು ಜಾಗರೂಕತೆಯಿಂದ ವಾಹನ ಚಲಾಯಿಸಿದರೂ ಅಪಘಾತ ನಡೆಯುವ ಕಾಲ ಇದು. ಇದತ ನಡುವೆ ಚಾಲಕನೊಬ್ಬ ಕುಡಿದು ಮತ್ತೇರಿಸಿಕೊಂಡು ಬಸ್‌ ಚಲಾಯಿಸಿ ಪ್ರಯಾಣಿಕರ ಜೀವವನ್ನೇ ಒತ್ತೆ ಇಟ್ಟ ಘಟನೆಯೊಂದು ಕರಾವಳಿಯಲ್ಲಿ ನಡೆದಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ಸೇರಿ ಚಾಲಕನನ್ನು (Drivers hungama) ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಆನಂದ್ ಟ್ರಾವೆಲ್ಸ್ ಬಸ್ ಇದಾಗಿದೆ. ಬೆಂಗಳೂರಿನಿಂದ ಕರಾವಳಿಗೆ 30ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿ ಹೊರಟಿದ್ದರು. ಬೆಂಗಳೂರಿನಿಂದ ಹೊರಟು ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬಸ್‌ ಎರ‍್ರಾಬಿರ‍್ರಿಯಾಗಿ ಚಲಿಸಲು ಆರಂಭವಾಯಿತು. ರಸ್ತೆಯಲ್ಲಿ ಆಚೆಗೊಮ್ಮೆ ಈಚೆಗೊಮ್ಮೆ ಓಲಾಡಲು ಶುರುವಾದಾಗ ಪ್ರಯಾಣಿಕರು ಭಯಗೊಂಡರು, ಸಿಟ್ಟಾದರು.

ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು ಬಸ್‌ ಬಿಟ್ಟು ಇಳಿಯುವಂತೆ ಸೂಚಿಸಿದರು. ಬಸ್ ಹಾಳಾದ ಹಿನ್ನಲೆಯಲ್ಲಿ ಹೀಗೆ ಬಸ್ ಚಲಾಯಿಸುತ್ತಿರುವುದಾಗಿ ಚಾಲಕ ವಾದ ಮಾಡಿದ. ನಿಜವೆಂದರೆ, ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಪಾನಮತ್ತರಾಗಿದ್ದರು ಎನ್ನಲಾಗಿದೆ.

ಪ್ರಶ್ನಿಸಿದಾಗ ಸಂಬಂಧವಿಲ್ಲದ ಉತ್ತರ ನೀಡುತ್ತಿದ್ದ ಅವರ ಕೈಯಲ್ಲಿ ತಮ್ಮ ಪ್ರಯಾಣ ಸುರಕ್ಷಿತವಲ್ಲ ಎಂದು ತಿಳಿದ ಪ್ರಯಾಣಿಕರು ಬೇರೆ ವ್ಯವಸ್ಥೆ ಮಾಡುವರೆಗೂ ಸ್ಥಳದಿಂದ ಮುಂದೆ ಹೋಗುವುದಿಲ್ಲ ಎಂದು ಹಠ ಹಿಡಿದರು.

ತಕ್ಷಣ ಹಾಸನ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ ಪ್ರಯಾಣಿಕರು ಬಸ್‌ ಸಂಸ್ಥೆಯ ಬೇಜವಾಬ್ದಾರಿತನಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಬಂದು ಬೇರೆ ವ್ಯವಸ್ಥೆ ಮಾಡಿದರು ಎನ್ನಲಾಗಿದೆ. ಸದ್ಯ ಘಟನೆ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ | Road accident | ಅಪಘಾತದಲ್ಲಿ ಮೃತಪಟ್ಟ ಸವದತ್ತಿ ಯಲ್ಲಮ್ಮ ಭಕ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Exit mobile version