1. ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತರಲಾಗಿದೆ. ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಿಗಿಂದ ಕಾರ್ಮಿಕರನ್ನು ಹೊರ ಕರೆ ತರಲಾಯಿತು(rescue operation). ಅಂತಿಮ ಹಂತದ ಕಾರ್ಯಾಚರಣೆ ಆರಂಭವಾದ ಅರ್ಧ ಗಂಟೆಯಲ್ಲಿ ಎಲ್ಲ 41 ಕಾರ್ಮಿಕರು ಸುರಂಗದ ಅವಶೇಷಗಳಿಂದ ಹೊರ ಬಂದಿದ್ದಾರೆ. ಅಂತೂ, ಸುರಂಗದ ಅವಶೇಷಗಳಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೈಗೊಂಡ ಕಾರ್ಯಾಚರಣೆಯು ಮಂಗಳವಾರ (ನವೆಂಬರ್ 28) ಫಲ ಕೊಟ್ಟಿದೆ (Uttarkashi Tunnel Rescue). ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಯತ್ನವು ಯಶಸ್ವಿಯಾಗಿದೆ. ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
2. ಮಕ್ಕಳ ಮಾರಾಟದ ಬೃಹತ್ ಜಾಲ ಪತ್ತೆ; ಹೊಟ್ಟೆಯಲ್ಲಿ ಇರುವಾಗಲೇ ಬುಕಿಂಗ್!
ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಭ್ರೂಣ ಹತ್ಯೆ ಜಾಲದ (feticide scam) ಭಯಾನಕ ಮುಖಗಳು ಒಂದೊಂದಾಗಿ ಹೊರಬರುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಇನ್ನೊಂದು ಆತಂಕಕಾರಿ ದಂಧೆ ಬಯಲಾಗಿದೆ. ಇದು ಹಸುಗೂಸುಗಳನ್ನೇ (Newborn Child Market) ಮಾರಾಟ ಮಾಡುವ ಕ್ರಿಮಿನಲ್ ದಂಧೆ. ಸಾಮಾನ್ಯವಾಗಿ ಮಕ್ಕಳ ಮಾರಾಟ ಜಾಲ ಎಂದರೆ ಮಕ್ಕಳನ್ನು ಅಪಹರಣ (Children kidnap) ಮಾಡಿ ಮಾರಾಟ ಮಾಡುವುದು ಅಥವಾ ಹೆತ್ತವರೇ ತಮ್ಮ ಮಕ್ಕಳನ್ನು ಮಾರಾಟ ಮಾಡುವುದು ಎಂದು ಅಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಬಯಲಾಗಿರುವುದು ಅದನ್ನೂ ಮೀರಿದ ದಂಧೆ. ಅದೇನೆಂದರೆ ಮಕ್ಕಳನ್ನು ಮಾರಾಟಕ್ಕಾಗಿಯೇ ಹುಟ್ಟಿಸಿ ಬಳಿಕ ಮಾರಾಟ ಮಾಡುವ ದಂಧೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Child Trade : ಒಂದು ಮಗು ಹೆತ್ತು ಕೊಟ್ರೆ ತಾಯಿಗೆ 3 ಲಕ್ಷ, ಏಜೆಂಟ್‌ಗೆ 5 ಲಕ್ಷ ರೂ.!
3. ನಿಗಮ-ಮಂಡಳಿ ಲಿಸ್ಟ್ ಡೆಲ್ಲಿಗೆ ರವಾನೆ; ಶಾಸಕರಿಗೆ ಮಾತ್ರ ಅವಕಾಶವೆಂದ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress Karnataka) ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದ ಬಳಿಕ ನಿಗಮ – ಮಂಡಳಿಗಳ ಅಧ್ಯಕ್ಷರ ಆಯ್ಕೆ ಫೈನಲ್ ಆಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ನಡುವಿನ ಮುಸುಕಿನ ಗುದ್ದಾಟದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೇಲುಗೈ ಸಾಧಿಸಿದ್ದಾರೆ. ಕಾರ್ಯಕರ್ತರಿಗೂ ಈ ಬಾರಿ ಅವಕಾಶ ನೀಡಬೇಕು ಎಂಬ ಡಿಕೆಶಿ ಬೇಡಿಕೆಗೆ ಈ ಬಾರಿ ಬೆಲೆ ಸಿಕ್ಕಿಲ್ಲ. ಹೀಗಾಗಿ ಮೊದಲ ಹಂತದ ಲಿಸ್ಟ್‌ನಲ್ಲಿ ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
4. ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು (CBI Case against DK Shivakumar) ಹಿಂದಕ್ಕೆ ಪಡೆಯುವ ರಾಜ್ಯ ಸಚಿವ ಸಂಪುಟದ (State Cabinet meeting) ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagowda pateel Yatnal) ಅವರು ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದಾರೆ. ಸರ್ಕಾರದ ಈ ನಡೆ ಕಾನೂನುಬಾಹಿರವಾಗಿದ್ದು, ಇದನ್ನು ತಡೆಯಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ ದಾವೆಯಲ್ಲಿ ಮನವಿ ಮಾಡಲಾಗಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
5. ಸಿಎಂ, ಡಿಸಿಎಂ ನಡೆಗೆ ಹಿರಿಯ ಸಚಿವರ ಮುನಿಸು; ಅಭಿಪ್ರಾಯ ಕೇಳುತ್ತಿಲ್ಲವೆಂದ ಪರಮೇಶ್ವರ್!
ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಒಂದನ್ನು ಬಗೆಹರಿಸುವ ಹೊತ್ತಿಗೆ ಮತ್ತೊಂದು ಶುರು ಎಂಬಂತೆ ಆಗುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರ ನಡೆಗೆ ಹಿರಿಯ ಸಚಿವರು ಅಸಮಾಧಾನಗೊಂಡಿದ್ದಾರೆ. ಜತೆಗೆ ಹೈಕಮಾಂಡ್ (Congress High Command) ಬಗ್ಗೆಯೂ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಬೇಕಿದ್ದರೂ ಸಲಹೆಗಳನ್ನು ಸಹ ಕೇಳುತ್ತಿಲ್ಲ. ಅವರಿಬ್ಬರೇ ಫೈನಲ್ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಹೈಕಮಾಂಡ್ ಕೂಡಾ ಮಣೆ ಹಾಕುತ್ತಿದೆ ಎಂಬ ಅಸಮಾಧಾನವನ್ನು ಹೊರಹಾಕಲಾಗುತ್ತಿದೆ. ಈಗ ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಸ್ವತಃ ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
6. ಯೂಟ್ಯೂಬ್ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?
ಬೆಂಗಳೂರು: ಕಳೆದ ವರ್ಷ ತೆರೆಕಂಡ ʼಕಾಂತಾರʼ ಚಿತ್ರ (Kantara Movie) ಸೂಪರ್ ಹಿಟ್ ಆಗಿತ್ತು. ಕನ್ನಡ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಎರಡನೇ ಭಾಗ ಬರುತ್ತದೆ ಎನ್ನುವಾಗಲೇ ಸಾಕಷ್ಟು ಕುತೂಹಲ ಮೂಡಿತ್ತು. ಅದರಂತೆ ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : ಕನ್ನಡ ಚಿತ್ರಗಳನ್ನು ನಿರಾಕರಿಸುತ್ತಿರುವ ಒಟಿಟಿ ವೇದಿಕೆಗಳು: ರಿಷಬ್ ಶೆಟ್ಟಿ ಆರೋಪ
7. ಗೂಳಿ’ಯಂತೆ ಜಿಗಿದ ಅದಾನಿ ಗ್ರೂಪ್ ಷೇರುಗಳ ಮೌಲ್ಯ, 20% ಏರಿಕೆಗೆ ಏನು ಕಾರಣ?
ಮುಂಬೈ: ಗೌತಮ್ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್ ಷೇರುಗಳ (Adani Stocks) ಮೌಲ್ಯವು ಮಂಗಳವಾರ (ನವೆಂಬರ್ 18) ದಿಢೀರನೇ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ವಹಿವಾಟು (Share Market) ಆರಂಭವಾಗುತ್ತಲೇ ಅದಾನಿ ಗ್ರೂಪ್ ಷೇರುಗಳ ಮೌಲ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಾನಿ ಗ್ರೂಪ್ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
8. ಆಧಾರ್ ಮಾಹಿತಿ ಪಕ್ಕಾ ಪರ್ಸನಲ್, ಹೆಂಡತಿಗೂ ಕೊಡುವಂತಿಲ್ಲ!
ಬೆಂಗಳೂರು: ಆಧಾರ್ ಕಾರ್ಡ್‌ಗೆ (Aadhaar Card) ಸಂಬಂಧಿಸಿದ ಮಾಹಿತಿಗಳು ಖಾಸಗಿಯಾಗಿದ್ದು, ಅದನ್ನು ಹೆಂಡತಿಗೂ ಕೊಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High court) ಮಹತ್ವದ ತೀರ್ಪೊಂದರಲ್ಲಿ ಹೇಳಿದೆ. ಗಂಡ-ಹೆಂಡತಿ ಮಧ್ಯೆ ಏನು ಗೌಪ್ಯತೆ, ಹೆಂಡತಿಯ ಮಾಹಿತಿಯನ್ನು ಗಂಡನಿಗೆ, ಗಂಡನ ಮಾಹಿತಿಯನ್ನು ಹೆಂಡತಿಗೆ ನೀಡಬಹುದಲ್ಲವೇ ಎಂಬ ಪ್ರಶ್ನೆಗೆ ಕೋರ್ಟ್ ಕಾನೂನಿನ ಉತ್ತರ ನೀಡಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
9. ದುಡ್ಡು ಖಾಲಿಯಾಗಿದ್ದು ಆರ್ಸಿಬಿಯದ್ದು, ಲಾಭ ಆಗುತ್ತಿರುವುದು ಮುಂಬೈಗೆ!
ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
10. `ಗೇ’ ಆ್ಯಪ್‌ನಲ್ಲಿ ಸಿಕ್ಕ ಮಹಾಶೂರ; ಮೀಟ್ ಮಾಡಲು ಬಂದವ ಲೂಟ್ ಮಾಡಿದ!
ಬೆಂಗಳೂರು: ಈಗಂತೂ ಆನ್‌ಲೈನ್‌ನಲ್ಲಿ ನೂರಾರು ಡೇಟಿಂಗ್ ಆ್ಯಪ್‌ಗಳು (Dating App) ಸಿಗುತ್ತವೆ. ಇದರ ಹಿಂದೆ ಬಿದ್ದ ಯುವಜನತೆ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಆಡುಗೋಡಿಯಲ್ಲಿ ಗ್ರೈಂಡರ್ (GRINDR) ಎಂಬ ಗೇ ಡೇಟಿಂಗ್ ಆ್ಯಪ್ (Gay App) ಮೂಲಕ ಪರಿಚಯ ಆದವನೇ ದರೋಡೆಕೋರನಾಗಿ ಎಲ್ಲವನ್ನೂ (Robbery Case) ದೋಚಿ ಹೋಗಿದ್ದಾನೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.