Site icon Vistara News

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ವಿಜಯಪುರ: ಉತ್ತರ ಕರ್ನಾಟಕದ ಪ್ರತಿಷ್ಠಿತ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಯು ಪೂರ್ಣ ಮಟ್ಟಕ್ಕೆ ಆರ್.ಎಲ್. 519.60 ಮೀ.ವರೆಗೆ (123 ಟಿ.ಎಂ.ಸಿ.) ತಲುಪಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣೆಯ ಜಲಧಿಗೆ ಬುಧವಾರ ಗಂಗಾಪೂಜೆ ನೇರವೇರಿಸಿ ಬಾಗಿನ (Almatti Dam) ಅರ್ಪಣೆ ಮಾಡಿದರು.

ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯು.ಕೆ.ಪಿ.-1 ಮತ್ತು 2 ರಲ್ಲಿ 173 ಟಿಎಂಸಿ. ನೀರಿನ ಹಂಚಿಕೆಯಡಿ ಒಟ್ಟು 6.67 ಲಕ್ಷ ಹೆಕ್ಟೇರ್ (16.47 ಲಕ್ಷ ಎಕರೆ) ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಯು.ಕೆ.ಪಿ ಹಂತ-3 ಕ್ಕೆ ಹಂಚಿಕೆಯಾದ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 519.60 ಮೀ ನಿಂದ 524.256 ಮೀ ವರೆಗೆ (15 ಅಡಿ) ಎತ್ತರಿಸುವುದು ಒಳಗೊಂಡಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಒಟ್ಟಾರೆ 5.94 ಲಕ್ಷ ಹೆಕ್ಟೇರ್ (14.68 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಸಂಗ್ರಹಣೆಯನ್ನು 524.256 ಮೀ. ಗೆ ಹೆಚ್ಚಿಸಿದಲ್ಲಿ ಹಿನ್ನೀರಿನಲ್ಲಿ 188 ಗ್ರಾಮಗಳಡಿಯ ಸುಮಾರು 75,000 ಎಕರೆ ಜಮೀನು ಮುಳುಗಡೆ ಹೊಂದಲಿದೆ. ಅಲ್ಲದೇ, ಮುಳುಗಡೆ ಹೊಂದುವ 20 ಗ್ರಾಮಗಳಡಿ ಬಾಗಲಕೋಟ ಪಟ್ಟಣ ಒಳಗೊಂಡು ಬೃಹತ್ ಪ್ರಮಾಣದ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಕ್ರಮಗಳನ್ನು ಹೊಸ ಭೂಸ್ವಾಧೀನ-2013 ರ ಕಾಯ್ದೆಯನ್ವಯ ಜರುಗಿಸುವುದಾಗಿರುತ್ತದೆ. ಒಟ್ಟಾರೆ 1.34 ಲಕ್ಷ ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಇಲ್ಲಿಯವರೆಗೆ 28,878 ಎಕರೆ ಕ್ಷೇತ್ರವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

ಈ ಯೋಜನೆಯ ಅನುಷ್ಠಾನಕ್ಕೆ ರೂ.51,148.94 ಕೋಟಿ (2014-15ರ ದರಪಟ್ಟಿ) ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರವು 2017ರ ಅ.9ರಂದು ಅನುಮೋದನೆ ನೀಡಿದೆ. ಈ ಪೈಕಿ ಭೂಸ್ವಾಧೀನ ಮತ್ತು ಆರ್ & ಆರ್ ಗಾಗಿ 30,143.00 ಕೋಟಿ ರೂ. ಪ್ರಾವಿಧಾನ ಮಾಡಲಾಗಿದೆ. ಇಲ್ಲಿಯವರೆಗೆ (ಜುಲೈ-2024 ಅಂತ್ಯಕ್ಕೆ) ಖರ್ಚಾದ ವಿವರಗಳು ಈ ಕೆಳಗಿನಂತಿವೆ:

ಮುಂದುವರಿದು, ಯು.ಕೆ.ಪಿ.-3 ರ ಅನುಷ್ಠಾನಕ್ಕಾಗಿ ಇತ್ತೀಚಿನ ದರಪಟ್ಟಿ ಮತ್ತು ಒಪಂದದ ಐತೀರ್ಪಿನ ಭೂಸ್ವಾಧೀನ ದರಗಳನ್ನು ಪರಿಗಣಿಸಿ ಸುಮಾರು ರೂ.83,700.00 ಕೋಟಿ ರಷ್ಟು ಅಂದಾಜಿಸಲಾಗಿದೆ. ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪು ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸುವುದು ಬಾಕಿ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

Exit mobile version