Site icon Vistara News

Ambaari Utsav Bus: ರಸ್ತೆಗಿಳಿಯಿತು ವಿಮಾನದಂಥ ಅನುಭವ ನೀಡುವ ಅಂಬಾರಿ ಉತ್ಸವ ಬಸ್ಸು, ಏನೆಲ್ಲ ಸೌಲಭ್ಯಗಳಿವೆ?

#image_title

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಗೇ ಹೆಮ್ಮೆ ಎನಿಸುವ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳು (KSRTC Ambari Utsav Bus) ಸೋಮವಾರ ಲೋಕಾರ್ಪಣೆಗೊಂಡಿವೆ. ಆ ಮೂಲಕ ನಮ್ಮ ಕೆ.ಎಸ್.ಆರ್.ಟಿ.ಸಿ ಇಡೀ ದೇಶದಲ್ಲಿ ಈ ರೀತಿಯ ಐಷಾರಾಮಿ ಬಸ್ಸನ್ನು ಹೊಂದಿರುವ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿದೆ. ಅಷ್ಟಕ್ಕೂ ಏನಿದು ಹೊಸ ಬಸ್ಸು, ಏನಿದರ ವಿಶಿಷ್ಟತೆ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಅದಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Road accident | ಕೆಎಸ್ಸಾರ್ಟಿಸಿ ಬಸ್- ಬೈಕ್ ನಡುವೆ ಭೀಕರ ಅಪಘಾತ: ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

15 ಮೀಟರ್ ಉದ್ದದ ಐಷಾರಾಮಿ ಬಸ್

ಈಗಾಗಲೇ ಕೆ.ಎಸ್.ಆರ್.ಟಿ.ಸಿ ಅಲ್ಲಿ ಹಲವಾರು ಸ್ಲೀಪರ್ ಕೋಚ್ ಬಸ್ಸುಗಳಿವೆ. ಆದರೆ ಅವೆಲ್ಲಕ್ಕಿಂತಲೂ ಅತ್ಯುತ್ತಮ ಸೌಕರ್ಯಗಳು ಈ ಅಂಬಾರಿ ಉತ್ಸವ ಬಸ್ಸಿನಲ್ಲಿರಲಿದೆ. 15 ಮೀಟರ್ ಉದ್ದವಿರುವ ಈ ಬಸ್ಸಿನಲ್ಲಿ 40 ಆಸನಗಳ ವ್ಯವಸ್ಥೆ ಇದೆ. ಪ್ರಯಾಣಿಕರು ಮಲಗುವುದಕ್ಕೆ ಹಾಗೆಯೇ ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇದು ಯುರೋಪಿಯನ್ ಮಾದರಿಯ ವೋಲ್ವೋ 9600 ಎಸಿ ಸ್ಲೀಪರ್ ಬಸ್ಸಾಗಿದೆ.

ಅಂಬಾರಿ ಬಸ್‌ನಲ್ಲಿರುವ ಸೌಲಭ್ಯಗಳೇನು?

ಖಾಸಗಿ ಬಸ್ಸುಗಳಲ್ಲೂ ಇರದಂತಹ ಎಷ್ಟೋ ಸೌಲಭ್ಯಗಳು ಇದರಲ್ಲಿವೆ. ಪಿಯು ಫೋಮ್ ಸ್ಲೀಪರ್ ಆಸನ ಜತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ವಾಹನ ಇದಾಗಿದೆ. ಪ್ರತಿ ಆಸನದ ಬಳಿ ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯ ನೀಡಲಾಗಿದೆ.

ಹಾಗೆಯೇ 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನವು ಇದರಲ್ಲಿದೆ. ಬಸ್ಸಿನಲ್ಲಿ ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆ ವ್ಯವಸ್ಥೆ ನೀಡಲಾಗಿದೆ. ಬಸ್ಸಿನ ನಿರ್ಮಾಣಕ್ಕೆ ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಯೀಕರಿಸಿದ ವಸ್ತುಗಳನ್ನು ಬಳಕೆ ಮಾಡಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: Road Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಾಬಾಗೆ ನುಗ್ಗಿದ ಟಿಪ್ಪರ್‌: ಒಬ್ಬರು ಸಾವು

ಇನ್ನೂ 35 ಅಂಬಾರಿ ಬಸ್ ಬರಲಿವೆ

ಸದ್ಯ 15 ಅಂಬಾರಿ ಉತ್ಸವ ಬಸ್ಸುಗಳಿಗೆ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಇನ್ನೂ 35 ಬಸ್ಸುಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದು ಹೇಳಲಾಗಿದೆ. ಈ ಬಸ್ಸುಗಳ ನಿಖರವಾದ ಮಾರ್ಗ ಮತ್ತು ಟಿಕೆಟ್ ದರ ನಿಗದಿಯಾಗಿಲ್ಲ.

Exit mobile version