Site icon Vistara News

PM Modi: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅಂಬೇಡ್ಕರ್‌ಗೆ ಅಪಮಾನ ಆರೋಪ, ರಾತ್ರೋರಾತ್ರಿ ಉಬ್ಬುಚಿತ್ರ ಅಳವಡಿಕೆ

ambedkar

ಬೆಳಗಾವಿ: ಬೆಳಗಾವಿಯ ನವೀಕೃತ ರೇಲ್ವೆ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ ಮಾಡಲಾಗಿದೆ ಎಂಬ ದಲಿತ, ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ರೇಲ್ವೆ ಇಲಾಖೆ, ನಿಲ್ದಾಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಉಬ್ಬುಚಿತ್ರ ಅಳವಡಿಕೆ ಮಾಡಿದೆ.

190 ಕೋಟಿ ವೆಚ್ಚದಲ್ಲಿ ನವೀಕೃತಗೊಂಡಿರುವ ಬೆಳಗಾವಿ ರೇಲ್ವೆ ನಿಲ್ದಾಣವನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನವೀಕೃತ ರೇಲ್ವೆ ನಿಲ್ದಾಣ ಹೊರ-ಒಳಭಾಗದಲ್ಲಿ ವಿವಿಧ ಮಹನೀಯರ ಉಬ್ಬು ಚಿತ್ರ ಅಳವಡಿಕೆ ಮಾಡಲಾಗಿತ್ತು. ಆದರೆ ಡಾ.ಬಿ.ಆರ್.ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಉಬ್ಬು ಚಿತ್ರ ಸಿದ್ಧಪಡಿಸಿದ್ದರೂ ಅಳವಡಿಕೆ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ದಲಿತ ಸಂಘರ್ಷ ಸಮಿತಿ, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಗೋದಾಮಿನಲ್ಲಿ ಇಟ್ಟಿದ್ದ ಉಬ್ಬು ಚಿತ್ರ ಹೊರತಂದು ಪ್ರತಿಭಟನೆ ಆರಂಭಿಸಿದ್ದರು. ಬೇಡಿಕೆ ಈಡೇರದಿದ್ದರೆ ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ನೀಡಿದ್ದಋು.

ಇದರಿಂದ ಎಚ್ಚೆತ್ತುಕೊಂಡ ರೇಲ್ವೆ ಇಲಾಖೆ, ಮಧ್ಯರಾತ್ರಿಯೇ ಬೆಳಗಾವಿ ರೇಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಡಾ.ಬಿ.ಆರ್‌.ಅಂಬೇಡ್ಕರ್ ಉಬ್ಬು ಚಿತ್ರ ಅಳವಡಿಸಿದೆ. ಜೊತೆಗೆ ಡಾ.ಬಿ.ಆರ್‌‌‌.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಕಾರ್ಯಕರ್ತರು ಹಾಕಿದ್ದಾರೆ.

ಇದನ್ನೂ ಓದಿ: PM Modi: ಕುಂದಾನಗರಿಗೆ ಇಂದು ಮೋದಿ ಭೇಟಿ, ಐವರು ಜನಸಾಮಾನ್ಯರಿಂದ ಸ್ವಾಗತ, 10 ಕಿಮೀ ರೋಡ್‌ ಶೋ

Exit mobile version