ಕಲಬುರಗಿ: ಕಲಬುರಗಿಯ ಕೋಟನೂರ ಬಡಾವಣೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ (Ambedkar Statue) ಸೋಮವಾರ ರಾತ್ರಿ ಯಾರೋ ದುಷ್ಕರ್ಮಿಗಳು ಅಪಮಾನ (Desecration of Ambedkar statue) ಮಾಡಿದ್ದರಿಂದ ಈ ಭಾಗದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದರಿಂದ ಆಕ್ರೋಶಗೊಂಡಿರುವ ದಲಿತ ಸಮುದಾಯದವರು ರಸ್ತೆ ತಡೆ (Road block in kalaburagi) ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿಯ ಒಂದು ಪೆಟ್ರೋಪ್ ಪಂಪ್‌ಗೆ ಹಾನಿ ಮಾಡಲಾಗಿದೆ.
ಕೋಟನೂರ ಬಡಾವಣೆಯಲ್ಲಿರುವ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವುದು ಮಂಗಳವಾರ ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದನ್ನು ನೋಡಿ ಆಕ್ರೋಶಿತರಾದ ಜನರು ಪ್ರತಿಭಟನೆಗೆ ಇಳಿದರು. ರಸ್ತೆ ತಡೆಯ ವಿಷಯ ವಿಷಯ ತಿಳಿಯುತ್ತಲೇ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವುದಾಗಿ ಡಿಸಿಪಿ ಭರವಸೆ ನೀಡಿದರು. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಒಂದು ಹಂತಕ್ಕೆ ಸಫಲರಾದರೂ ಅದು ಬೇರೆ ಬೇರೆ ಭಾಗಗಳಿಗೆ ಹರಡಿತು.
ಕಲಬುರಗಿಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ
ಕೋಟನೂರು ಬಡಾವಣೆಯಲ್ಲಿ ನಡೆದ ಘಟನೆ ಪ್ರತಿಯಾಗಿ ದಲಿತ ಸಮುದಾಯದವರು ಕಲಬುರಗಿಯ ಎಸ್ ವಿ ಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಎಸ್ ವಿ ಪಿ ವೃತ್ತದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಆ ಭಾಗದಲ್ಲಿ ಆಗಮಿಸಿದ ಟಂ ಟಂ ವಾಹನದಿಂದ ನೀರಿನ ಕ್ಯಾನ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಇದಾಗಿ ಕೆಲವೇ ನಿಮಿಷದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಕಾಳಗಿ ಡಿಪೋಗೆ ಸೇರಿದ ಬಸ್ ಒಂದನ್ನು ತಡೆದು ಪ್ರತಿಭಟನೆ ನಡೆಸಿದರು.
ಪೆಟ್ರೋಲ್ ಬಂಕ್ ಮೇಲೆ ಕಲ್ಲು ತೂರಾಟ
ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪೆಟ್ರೋಲ್ ಬಂಕ್‌ನ ಕಚೇರಿಯ ಕಿಟಕಿ ಪುಡಿ ಪುಡಿ ಮಾಡಲಾಗಿದೆ. ಅಲ್ಲಿನ ಸ್ವೈಪ್ ಮಷಿನ್‌ನನ್ನು ಒಡೆದು ಹಾಕಿಕಿದ್ದಾರೆ. ಪೊಲೀಸರು ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Murder Case : ಮೇಲುಕೋಟೆ ದೀಪಿಕಾ ಕೊಲೆ ಕೇಸ್; ಅಕ್ಕ ಎಂದವನೇ ಇಟ್ಟನಾ ಮುಹೂರ್ತ
ಜೇವರ್ಗಿಯಲ್ಲಿ ತೀವ್ರಗೊಂಡ ಪ್ರತಿಭಟನೆ
ಈ ನಡುವೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಜೇವರ್ಗಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಭೀಮ ಆರ್ಮಿ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿದ್ದಾರೆ.