Site icon Vistara News

Road accident | ಕುಮಟಾ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ: ರೋಗಿ ಸ್ಥಳದಲ್ಲೇ ಸಾವು

Ambulance

ಕಾರವಾರ: ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಒಂದು ರಸ್ತೆಯಂಚಿಗೆ ಉರುಳಿಬಿದ್ದ ಹಿನ್ನೆಲೆಯಲ್ಲಿ (Road accident) ರೋಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿದ್ದ ಇತರ ಕೆಲವರಿಗೆ ಗಾಯಗಳಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಬೆಟ್ಕುಳಿ ಗ್ರಾಮದ ಬಳಿ ಘಟನೆ ಘಟನೆ ನಡೆದಿದೆ. ಮನೋಜ್ ಗುರವ್(50) ಮೃತ ದುರ್ದೈವಿ.

ಕಾರವಾರದ ಕಿನ್ನರ ಮೂಲದ ಮನೋಜ್ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟಿದ್ದರು. ಅವರನ್ನು ತುರ್ತಾಗಿ ಸಾಗಿಸಲು ವೇಗವಾಗಿ ಸಾಗುತ್ತಿದ್ದ ವೇಳೆ ಆಂಬ್ಯುಲೆನ್ಸ್‌ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿತು.

ಪಲ್ಟಿಯಾದ ರಭಸಕ್ಕೆ ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯ ಸಂಬಂಧಿ ಹಾಗೂ ಚಾಲಕನಿಗೂ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿದ್ದು, ಸ್ಥಳಕ್ಕೆ ಗೋಕರ್ಣ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Road Accident : ಚಾಲಕರ ಓವರ್‌ಟೇಕ್‌ ಹುಚ್ಚಾಟದಿಂದ ಟ್ರ್ಯಾಕ್ಟರ್‌ ಅಪಘಾತ; ಮೂವರ ಸಾವು, ಒಬ್ಬ ಗಂಭೀರ

Exit mobile version