ಚಿಕ್ಕಮಗಳೂರು: ಕಷ್ಟ ಕಾಲದಲ್ಲಿ ರೋಗಿಗಳ, ಅಶಕ್ತರ ನೆರವಿಗೆ ನಿಲ್ಲಬೇಕಾದ ೧೦೮ ಆಂಬ್ಯುಲೆನ್ಸ್ ಸಹಾಯ ಮಾಡುವುದಕ್ಕಿಂತಲೂ ಕಷ್ಟ ಕೊಡುವುದೇ ಹೆಚ್ಚು ಎಂಬಂತಾಗಿದೆ.
ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿಯಲ್ಲಿ ತುಂಬು ಗರ್ಭಿಣಿಯನ್ನು ಕರೆದುಕೊಂಡು ಆಸ್ಪತ್ರೆಗೆ ಸಾಗುತ್ತಿದ್ದ ಆಂಬ್ಯುಲೆನ್ಸ್ ಒಂದು ರಸ್ತೆ ಮಧ್ಯೆ ಕೆಟ್ಟು ನಿಂತು ಭಾರಿ ತೊಂದರೆ ಉಂಟಾಯಿತು. ಹದಗೆಟ್ಟ ರಸ್ತೆಯಿಂದಾಗಿ ಆಂಬ್ಯುಲೆನ್ಸ್‌ನ ಆಕ್ಸಿಲ್ ಕೆಟ್ಟು ನಿಂತಿದ್ದು, ಹಿಂದಕ್ಕೂ ಹೋಗಲಾರದೆ ಮುಂದೆ ಸಾಗಲಾರದೆ ಗರ್ಭಿಣಿ ನರಳಾಡಿದರು.
ಗರ್ಭಿಣಿ ಮಹಿಳೆಯನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್‌ನ್ನು ಕರೆಸಿಕೊಳ್ಳಲಾಗಿತ್ತು. ಆದರೆ, ಆ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ.
ಈ ಹಂತದಲ್ಲಿ ಮತ್ತೊಂದು ವಾಹನದ ಸಹಾಯದಿಂದ ಆಂಬ್ಯುಲೆನ್ಸ್‌ನ್ನು ಎಳೆದೊಯ್ದು ರಿಪೇರಿ ಮಾಡಿಸಲಾಯಿತು. ರಿಪೇರಿ ಬಳಿಕ ಮತ್ತೆ ಕೆಟ್ಟು ನಿಂತಿದೆ. ಹೀಗಾಗಿ ಬಾಳೆಹೊನ್ನೂರಿನಿಂದ ಆಂಬ್ಯುಲೆನ್ಸ್ ಕರೆಸಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಸುಮಾರು ಒಂದೂವರೆ ಎರಡು ಗಂಟೆ ಗರ್ಭಿಣಿ ನರಕ ಯಾತನೆ ಅನುಭವಿಸಿದರು.
ಇದನ್ನೂ ಓದಿ : Child Dead In Ambulance : ಸಕಾಲಕ್ಕೆ ಸಿಗದ ಚಿಕಿತ್ಸೆ; ಆಂಬ್ಯುಲೆನ್ಸ್‌ನಲ್ಲೇ ಗರ್ಭಿಣಿಗೆ ಹೆರಿಗೆ, ಮಗು ಸಾವು