Site icon Vistara News

Design Center : ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಿ ಎಎಂಡಿ

Data center

ಬೆಂಗಳೂರು : ಎಎಂಡಿ (ನಾಸ್ಡಾಕ್: ಎಎಂಡಿ) ಬೆಂಗಳೂರಿನಲ್ಲಿ ಮಂಗಳವಾರ (ನವೆಂಬರ್​ 28ರಂದು​ ) ತನ್ನ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು (Design Center ) ಉದ್ಘಾಟಿಸಿದೆ. ಇದು ಭಾರತದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕಂಪನಿಯ ಯೋಜನೆಯಾಗಿದೆ. ಅತ್ಯಾಧುನಿಕ ಕ್ಯಾಂಪಸ್ ಮುಂಬರುವ ವರ್ಷಗಳಲ್ಲಿ ಸರಿಸುಮಾರು 3,000 ಎಎಮ್​ಡಿ ಎಂಜಿನಿಯರ್​ಗಳಿಗೆ ಆತಿಥ್ಯ ವಹಿಸಲಿದೆ. 3 ಡಿ ಸ್ಟ್ಯಾಕಿಂಗ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಸೇರಿದಂತೆ ಅರೆವಾಹಕ ತಂತ್ರಜ್ಞಾನದ ವಿನ್ಯಾಸ ಮತ್ತು ಅಭಿವೃದ್ಧಿಯು ಈ ಕೇಂದ್ರದಲ್ಲಿ ನಡೆಯಲಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

ಎಎಮ್ಡಿ ಟೆಕ್ನೋಸ್ಟಾರ್ ಕ್ಯಾಂಪಸ್ ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯ 400 ಮಿಲಿಯನ್ ಡಾಲರ್ ಹೂಡಿಕೆಯ ಭಾಗವಾಗಿದೆ. ಡೇಟಾ ಸೆಂಟರ್ ಮತ್ತು ಪಿಸಿಗಳಿಗಾಗಿ ಉನ್ನತ ಕಾರ್ಯಕ್ಷಮತೆಯ ಸಿಪಿಯುಗಳು, ಡೇಟಾ ಸೆಂಟರ್ ಮತ್ತು ಗೇಮಿಂಗ್ ಜಿಪಿಯುಗಳು ಮತ್ತು ಎಂಬೆಡೆಡ್ ಸಾಧನಗಳ ಅಭಿವೃದ್ಧಿಗೆ ಕ್ಯಾಂಪಸ್ ಉತ್ಕೃಷ್ಟತೆಯ ಕೇಂದ್ರವಾಗಿ ಕಾರ್ಯನಿರ್ವಹಸಲಿದೆ.

ಬೃಹತ್​ ಕೇಂದ್ರ

500,000 ಚದರ ಅಡಿ ಕ್ಯಾಂಪಸ್ ಮತ್ತು ಕಚೇರಿ ಸ್ಥಳವು ಭಾರತೀಯ ಕಲೆ ಮತ್ತು ಕರಕುಶಲತೆಯನ್ನು ಹೊಂದಿದೆ. ಹಡಲ್ ಸ್ಥಳಗಳು ಮತ್ತು ಕಾನ್ಫರೆನ್ಸ್ ಕೊಠಡಿಗಳು. ಆಧುನಿಕ ಆರ್ &ಡಿ ಪ್ರಯೋಗಾಲಯಗಳನ್ನು ಹೊಂದಿದೆ. ದೊಡ್ಡ ಡೆಮೊ ಕೇಂದ್ರವನ್ನು ಇದು ಹೊಂದಿದೆ. 2000 ಕ್ಕೂ ಹೆಚ್ಚು ಉದ್ಯೋಗಿಗಳ ಸಭೆಗಳನ್ನು ಆಯೋಜಿಸಲು ವಿನ್ಯಾಸಗೊಳಿಸಲಾದ ಕೆಫೆಟೇರಿಯಾ ಮತ್ತು ಎಎಂಡಿ ಉದ್ಯೋಗಿಗಳ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಜಿಮ್ ಮತ್ತು ಯೋಗ ಕೇಂದ್ರವನ್ನು ಕ್ಯಾಂಪಸ್ ಒಳಗೊಂಡಿದೆ.

ಅಶ್ವಿನಿ ವೈಷ್ಣವ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಭಾರತದ ಅರೆವಾಹಕ ಕಾರ್ಯಕ್ರಮವು. ವಿನ್ಯಾಸ ಮತ್ತು ಪ್ರತಿಭೆಗಳಗೆ ಅನ್ವೇಷಣೆಗೆ ಒತ್ತು ನೀಡುತ್ತದೆ. ಎಎಂಡಿ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ವಿನ್ಯಾಸ ಕೇಂದ್ರವನ್ನು ಸ್ಥಾಪಿಸುತ್ತಿರುವುದು ಜಾಗತಿಕ ಕಂಪನಿಗಳು ಭಾರತದ ಮೇಲೆ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿ ಎಂದರು.

ಇದನ್ನೂ ಓದಿ : Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

ಎಎಂಡಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ ಮಾಸ್ಟರ್ ಮಾತನಾಡಿ, ಇಂದು ಬೆಂಗಳೂರಿನಲ್ಲಿ ನಮ್ಮ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಲು ನಮಗೆ ಸಂತೋಷವಾಗಿದೆ. ಈ ಹೂಡಿಕೆಯು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತದೆ. ದೇಶವು ನೀಡುವ ಅಸಾಧಾರಣ ಎಂಜಿನಿಯರಿಂಗ್ ಪ್ರತಿಭೆಗಳಲ್ಲಿ ನಮ್ಮ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.

ಎಎಮ್ಡಿ ಇಂಡಿಯಾ ಕಂಟ್ರಿ ಹೆಡ್ ಜಯ ಜಗದೀಶ್ ಮಾತನಾಡಿ, ಇಂಡಿಯಾ ಡಿಸೈನ್ ಸೆಂಟರ್ 2004ರಲ್ಲಿ ಬೆರಳೆಣಿಕೆಯಷ್ಟು ಉದ್ಯೋಗಿಗಳೊಂದಿಗೆ ಪ್ರಾರಂಭವಾಯಿತು. ಇಂದು, ಎಎಮ್ಡಿಯ ಜಾಗತಿಕ ಕಾರ್ಯಪಡೆಯ 25% ಭಾರತದಲ್ಲಿದೆ. ಈ ಹೊಸ ಸೌಲಭ್ಯವು ಅರೆವಾಹಕಗಳ ಪ್ರಗತಿಯಲ್ಲಿ ಗಮನಾರ್ಹ ಕೊಡುಗೆ ನೀಡುವ ನಮ್ಮ ಬೆಳವಣಿಗೆಯ ಪ್ರಯಾಣದಲ್ಲಿ ಮುಂದಿನ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದರು.

Exit mobile version