Site icon Vistara News

Karnataka Election | ಅಮಿತ್​ ಶಾ ರೌಡಿ ಇದ್ದ ಹಾಗೆ, ಒಳಗೊಂದು, ಹೊರಗೊಂದು; ಸಿಪಿವೈ ವೈರಲ್​ ಆಡಿಯೊದಲ್ಲಿದೆ ಈ ಹೇಳಿಕೆ

cp yogeshwar

ಬೆಂಗಳೂರು : ವಿಧಾನ ಪರಿಷತ್​ ಸದಸ್ಯ ಸಿಪಿ ಯೋಗೇಶ್ವರ್​ ರಾಜ್ಯ ರಾಜಕಾರಣದ (Karnataka Election) ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊದಲ್ಲಿ, ಕೇಂದ್ರ ಗೃಹಮಂತ್ರಿ ಅಮಿತ್​ ಶಾ ಅವರನ್ನು ರೌಡಿ ಎಂದೂ ಕರೆಯಲಾಗಿದೆ. ಅವರು ಒಳಗೊಂದು ರೀತಿ, ಒಳಗೊಂದು ರೀತಿ ಇರುತ್ತಾರೆ ಎಂಬುದಾಗಿಯೂ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ವೈರಲ್​ ಆದ ಆಡಿಯೊ ತಮ್ಮದಲ್ಲ ಎಂಬುದಾಗಿ ಯೋಗೇಶ್ವರ್ ಅವರು ಹೇಳಿಕೆ ನೀಡಿದ್ದಾರೆ. ಆದಾಗ್ಯೂ ಅವರ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಹೊಂದಾಣಿಕೆ ರಾಜಕೀಯ ಬೇಡ ಎಂಬುದನ್ನು ಅಮಿತ್​ ಶಾ ಸ್ಪಷ್ಟಪಡಿಸಿದ್ದಾರೆ. ಅದು ತಾಯಿಗೆ ದ್ರೋಹ ಮಾಡಿದ ಹಾಗೆ ಎಂಬುದಾಗಿ ಅವರು ನಮ್ಮನ್ನು ಎಚ್ಚರಿಸಿದ್ದಾರೆ. ಅವರದ್ದು ಒಂಥರಾ ರೌಡಿಸಂ. ಆ ವ್ಯಕ್ತಿ ಮೇಲ್ನೋಟಕ್ಕೆ ಒಂದು ರೀತಿ ಇದ್ದಾರೆ. ಹೇಳುವುದೇ ಒಂದು ಮಾಡುವುದು ಮತ್ತೊಂದು. ಬೇರೆ ಪಕ್ಷಗಳ ಜತೆ ಒಳಒಪ್ಪಂದ ಮಾಡಿಕೊಂಡಿದ್ದು ಕಂಡು ಬಂದರೆ ಅವರು ನಮ್ಮನ್ನು ಸುಮ್ನನೆ ಬಿಡುವುದಿಲ್ಲ ಎಂಬುದಾಗಿ ಆಡಿಯೊದಲ್ಲಿ ಮಾತನಾಡಿರುವ ವ್ಯಕ್ತಿ ಹೇಳಿದ್ದಾರೆ.

ಮುಂದಿನ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯುವುದಿಲ್ಲ. ಆದರೂ ಬಿಜೆಪಿ ಸರಕಾರ ಮಾಡುತ್ತದೆ. ಆದರೆ ಕಳೆದ ಬಾರಿಯಂತೆ ಚುನಾವಣೆ ಬಳಿಕ ಆಪರೇಷನ್​ ಕಮಲ ಮಾಡುವುದಿಲ್ಲ. ಬದಲಾಗಿ ಚುನಾವಣೆಗೆ ಮೊದಲೇ ಬೇರೆ ಪಕ್ಷಗಳ ನಾಯಕರನ್ನು ಕರೆ ತರುತ್ತೇವೆ ಎಂಬುದಾಗಿ ಆಡಿಯೊದಲ್ಲಿ ಹೇಳಲಾಗಿದೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ 12ಕ್ಕೂ ಅಧಿಕ ಕ್ಷೇತ್ರಗಳಿವೆ. ಈ ಬಾರಿ ಹಲವರು ಸೋಲುತ್ತಾರೆ. ಕಳೆದ ಬಾರಿ ಬಿಜೆಪಿ ಮತ್ತು ಜೆಡಿಎಸ್​ ಹೊಂದಾಣಿಕೆಯಿಂದ ಸಾರಾ ಮಹೇಶ್​ ಗೆದ್ದರು. ಈ ಬಾರಿ ಸೋಲು ಖಚಿತ. ಅಂತೆಯೇ ಉತ್ತರ ಕರ್ನಾಟಕದಲ್ಲೂ ಮೂರು ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಆಡಿಯೊದಲ್ಲ ಮಾತನಾಡಿರುವ ವ್ಯಕ್ತಿ ಹೇಳಿದ್ದಾರೆ.

ಇದನ್ನೂ ಓದಿ | Karnataka Election : ಸಿಎಂ ಬೊಮ್ಮಾಯಿ ಕ್ಲಾಸ್‌; ಆಡಿಯೊ ನನ್ನದಲ್ಲ, 100% ನಮ್ಮದೇ ಬಹುಮತವೆಂದ ಸಿಪಿವೈ

Exit mobile version