Site icon Vistara News

Karnataka Election 2023: ಬಿಟಿಎಂ ಲೇಔಟ್‌ನಲ್ಲಿ ಅಮಿತ್‌ ಶಾ ರೋಡ್‌ ಶೋ; ಬಿಜೆಪಿ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಪರ ಮತಯಾಚನೆ

Amit Shah roadshow at BTM Layout Bjp candidate Sridhar Reddy seeks votes Karnataka Election 2023 updates

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರೋಡ್ ಶೋ ಅವರು ಭರ್ಜರಿ ರೋಡ್‌ ಶೋ ನಡೆಸಿದ್ದು, ಮತಯಾಚನೆ ಮಾಡಿದ್ದಾರೆ.

ಬಿಟಿಎಂ ಲೇಔಟ್ ಕ್ಷೇತ್ರದ ಆಡುಗೋಡಿ ಸಿಗ್ನಲ್‌ನಿಂದ ರೋಡ್‌ ಶೋವನ್ನು ಪ್ರಾರಂಭಿಸಲಾಗಿತ್ತು. ಅಲ್ಲಿಂದ ಸಾಗಿದ ರೋಡ್‌ ಶೋ ಮಡಿವಾಳದಲ್ಲಿರುವ ಟೋಟಲ್‌ ಮಾಲ್‌ವರೆಗೆ ತಲುಪಿತು. ಈ ವೇಳೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಬಿಜೆಪಿ, ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಪರ ಜಯಘೋಷಗಳು ಕೇಳಿಬಂದವು.

ತೆರೆದ ವಾಹನದಲ್ಲಿ ರೋಡ್‌ ನಡೆಸಿದ ಅಮಿತ್‌ ಶಾ ಅವರು, ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಜನಸಾಗರದ ನಡುವೆ ಸಾಗಿದರು. ರಸ್ತೆಯುದ್ದಕ್ಕೂ ಜನರತ್ತ ಕೈಬೀಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ಕ್ಷೇತ್ರದ ಅಭ್ಯರ್ಥಿ ಶ್ರೀಧರ ರೆಡ್ಡಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸಾಥ್‌ ನೀಡಿದರು.

ಬಿಟಿಎಂ ಲೇಔಟ್‌ನಲ್ಲಿ ನಡೆದ ಅಮಿತ್‌ ಶಾ ರೋಡ್‌ ಶೋದಲ್ಲಿ ಸೇರಿದ್ದ ಅಮಿತ್‌ ಶಾ.

ಇದನ್ನೂ ಓದಿ: Karnataka Election : ಚನ್ನಗಿರಿಯಲ್ಲಿ ಪಕ್ಷೇತರನಿಗೆ ಸಪೋರ್ಟ್; ಮಾಡಾಳು ಪುತ್ರನ ಜತೆ ಬಿಜೆಪಿ ಒಳ ಒಪ್ಪಂದ?

ಅಮಿತ್‌ ಶಾ ಮೇಲೆ ಪುಷ್ಪ ವೃಷ್ಟಿ

ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೇಲೆ ಹೂಮಳೆಯನ್ನೇ ಸುರಿಸಲಾಯಿತು. ರೋಡ್‌ ಶೋ ವೇಳೆ ಅವರ ಮೇಲೆ ಹೂವನ್ನು ಬೀರಿದ ಸಾರ್ವಜನಿಕರು, ಬಿಜೆಪಿ, ಬಿಜೆಪಿ ಎಂದು ಉದ್ಘೋಷವನ್ನು ಕೂಗಿದರು. ಒಂದು ಹಂತದಲ್ಲಿ ಮೋದಿ ಮೋದಿ ಜಯಘೋಷವು ಮುಗಿಲು ಮುಟ್ಟಿತ್ತು. ಇನ್ನು ಹಲವು ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡವನ್ನು ಧರಿಸಿ ಗಮನ ಸೆಳೆದರು.

ರಸ್ತೆಯಲ್ಲ ಕೇಸರಿಮಯ

ಅಮಿತ್‌ ಶಾ ರೋಡ್‌ ಶೋ ವೇಳೆ ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು. ಕೇಸರಿ ಶಾಲುಗಳನ್ನು ಹಾಕಿಕೊಂಡಿದ್ದ ಕಾರ್ಯಕರ್ತರು ರಸ್ತೆಯಲ್ಲೆಡೆ ತುಂಬಿದ್ದರು. ಅಲ್ಲದೆ, ಕಲಾ ತಂಡಗಳೂ ಭಾಗಿಯಾಗಿದ್ದು, ಮೆರವಣಿಗೆಗೆ ಮೆರಗು ತಂದವು.

ಬಿಜೆಪಿ ಗೆದ್ದೇ ಗೆಲ್ಲುತ್ತದೆ: ಶ್ರೀಧರ್ ರೆಡ್ಡಿ

ಈ ವೇಳೆ ಮಾತನಾಡಿದ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಧರ್ ರೆಡ್ಡಿ, ಈ ಕ್ಷೇತ್ರದಲ್ಲಿ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಈ ಭಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಇನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವ ಪ್ರಸ್ತಾಪ ಮಾಡಿರುವ ಬಗ್ಗೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿರುವ ಶ್ರೀಧರ್‌ ರೆಡ್ಡಿ, ಬಜರಂಗದಳ ಆಗಲಿ ಯಾವುದೇ ಸಂಘಟನೆಯನ್ನೇ ಆಗಲಿ ಕಾಂಗ್ರೆಸ್ ಏನೂ ಮಾಡಲು ಆಗುವುದಿಲ್ಲ‌ ಎಂದು ಹೇಳಿದರು. ‌

ಅಮಿತ್‌ ಶಾ ರೋಡ್‌ ಶೋ ವಿಡಿಯೊ ಇಲ್ಲಿದೆ

ಇದನ್ನೂ ಓದಿ: ಬ್ರಾಹ್ಮಣರು ಯಾರೂ ಭಾರತದವರಲ್ಲ, ಅವರನ್ನು ಇಲ್ಲಿಂದ ಓಡಿಸೋಣ; ವಿವಾದ ಸೃಷ್ಟಿಸಿದ ಆರ್​ಜೆಡಿ ನಾಯಕ

ನಮ್ಮ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿಯೂ ಸಹ ಬಿಜೆಪಿ ಪರ ಅಲೆ ಇದ್ದು, ಜನರು ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ನನ್ನ ಗೆಲುವು ನೂರಕ್ಕೆ ನೂರು ನಿಶ್ಚಿತ ಎಂದು ಶ್ರೀಧರ ರೆಡ್ಡಿ ಹೇಳಿದರು.

Exit mobile version