Site icon Vistara News

Amit Shah in Karavali : ಕರಾವಳಿಗೆ ಬಂದ ಅಮಿತ್‌ ಶಾಗೆ ಧರ್ಮಸ್ಥಳದಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಸಾದ

Amit shah Dharamasthala prasada

#image_title

ಮಂಗಳೂರು: ಕರಾವಳಿಯಲ್ಲಿ ಶನಿವಾರ ಮಿಂಚಿನ ಸಂಚಾರ ನಡೆಸಲಿರುವ (Amit Shah in Karavali) ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಶ್ರೀ ಕ್ಷೇತ್ರದ ಧರ್ಮಸ್ಥಳದ ವತಿಯಿಂದ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಪ್ರಸಾದವನ್ನು ನೀಡಲಾಗುತ್ತಿದೆ.

ಪುತ್ತೂರಿನ ಅಮರಗಿರಿಯಲ್ಲಿ ಭಾರತ್‌ ಮಾತಾ ದೇಗುಲದ ಲೋಕಾರ್ಪಣೆ ಮತ್ತು ಕ್ಯಾಂಪ್ಕೋ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಮಿತ್‌ ಶಾ ಅವರಿಗೆ ಬೆಳ್ಳಿಯ ತಟ್ಟೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಪ್ರಸಾದವನ್ನು ನೀಡಲಾಗುತ್ತಿದೆ.

ಬೆಳ್ಳಿ ತಟ್ಟೆಯಲ್ಲಿ ಪ್ರಸಾದ ಮತ್ತು ಒಂದು ಚಿನ್ನಲೇಪಿತ ಶ್ರೀಮಂಜುನಾಥಸ್ವಾಮಿ ಚಿತ್ರವಿರುವ ನಾಣ್ಯವನ್ನು ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ಆಂತರಿಕ ಸಭೆಯಲ್ಲಿ ನೀಡಲಾಗುತ್ತದೆ.

ಅಮಿತ್‌ ಶಾ ಅವರಿಗೆ ನೀಡಲಾಗುವ ಪ್ರಸಾದವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಹಸ್ತಾಂತರಿಸಿದರು. ಡಾ. ಹೆಗ್ಗಡೆಯವರು ಈಗ ರಾಜ್ಯಸಭಾ ಸದಸ್ಯರೂ ಆಗಿದ್ದು, ರಾಜ್ಯಸಭೆಯಲ್ಲಿ ಮಾತನಾಡುವ ಮೂಲಕ ದೇಶವ್ಯಾಪಿ ಗಮನ ಸೆಳೆದಿದ್ದಾರೆ.

ಈಶ್ವರಪ್ಪ ಸಂಭ್ರಮ
ಅಮಿತ್‌ ಶಾ ಅವರಿಗೆ ನೀಡಬೇಕಾಗಿರುವ ಪ್ರಸಾದ ಸ್ವೀಕರಿಸಲು ಧರ್ಮಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ದೇವರ ದರ್ಶನ ಮತ್ತು ವೀರೇಂದ್ರ ಹೆಗ್ಗಡೆಯವರ ಜತೆ ಮಾತುಕತೆ ನಡೆಸಿ ಸಂಭ್ರಮದಿಂದ ಇದ್ದರು.

ʻʻದೇಶದ ಗೃಹಸಚಿವರಾಗಿರುವ ಅಮಿತ್ ಶಾ ಸರ್ದಾರ್ ವಲ್ಲಬಾಯ್ ಪಟೇಲ್ ಪ್ರತಿರೂಪ. ದೇಶದ ರಕ್ಷಣೆ ಮಾಡುತ್ತಿರೋ ಅವರಿಗೆ ವೀರೇಂದ್ರ ಹೆಗ್ಗಡೆ ಅವರು ಪ್ರಸಾದ ಕೊಟ್ಟಿದ್ದಾರೆ. ಅದನ್ನು ನಾನು ಇಂದು ಅಮಿತ್ ಶಾ ಅವರಿಗೆ ತಲುಪಿಸುತ್ತೇನೆʼʼ ಎಂದು ಹೇಳಿದರು.

ಇದನ್ನೂ ಓದಿ : Amit Shah in Karavali : ಕರಾವಳಿಯಲ್ಲಿ ಅಮಿತ್‌ ಶಾ ಹವಾ, ಆರುವರೆ ಗಂಟೆ ಕಾಲ ಮಿಂಚಿನ ಸಂಚಾರಕ್ಕೆ ಕ್ಷಣಗಣನೆ

Exit mobile version