Site icon Vistara News

Amit Shah in state : ಮಾ.3ರಂದು ಅಮಿತ್‌ ಶಾ ಆಗಮನ, ಏನೇನು ಕಾರ್ಯಕ್ರಮ, ಎಲ್ಲೆಲ್ಲ ಭೇಟಿ?

Union Home Minister Amit Shah reached to Bidar to inaugurate vijay sankalp abhiyan

#image_title

ಬೆಂಗಳೂರು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾರ್ಚ್‌ 3ರಂದು ರಾಜ್ಯದಲ್ಲಿ ಸಂಚಾರ ನಡೆಸಲಿದ್ದು, (Amit Shah in state) ಹಲವು ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್‌ 2ರಂದು ರಾತ್ರಿ 10.40ಕ್ಕೆ ಬೀದರ್‌ಗೆ ಆಗಮಿಸಿ ವಾಸ್ತವ್ಯ ಹೂಡುವ ಅವರು ಶುಕ್ರವಾರ ರಾಜ್ಯ ಪ್ರವಾಸ ಮಾಡುವರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರು ತಿಳಿಸಿದ್ದಾರೆ.

ಮಾರ್ಚ್ 3ರಂದು ಬೆಳಗ್ಗೆ 10.30ಕ್ಕೆ ಅವರು ಬೀದರ್‌ನಲ್ಲಿ ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೀಬ್‌ಗೆ ಭೇಟಿ ನೀಡಿ ದರ್ಶನ ಪಡೆಯುವರು.

11.05ಕ್ಕೆ ಮಂಗಲ್‍ಪೇಟೆ ಮಲ್ಕಾಪುರ ರಸ್ತೆಯ ಶ್ರೀ ನರಸಿಂಹ ಝರ್ಣಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವರು.

ಮಧ್ಯಾಹ್ನ 12.20 ಗಂಟೆಗೆ ಅವರು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸುವರು.

ಬಳಿಕ 1.15 ಗಂಟೆಗೆ ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಸಂಜೆ 4.50ಕ್ಕೆ ಅವರು ಆವತಿಯ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ.

ಸಂಜೆ 5.10ಕ್ಕೆ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ 4ನೇ ರಥ ಯಾತ್ರೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗಲಿದ್ದಾರೆ.

ಇದನ್ನೂ ಓದಿ : Amit Shah: ಮೋದಿ, ಯಡಿಯೂರಪ್ಪ ಮೇಲೆ ಭರವಸೆ ಇಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದ ಅಮಿತ್‌ ಶಾ; ಬಿಎಸ್‌ವೈ ಅನಿವಾರ್ಯವಾದರಾ?

Exit mobile version