Site icon Vistara News

ಅ.15,16ರಂದು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ; ಮಂಡ್ಯ, ಹಾಸನ, ತುಮಕೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ

ದೆಹಲಿ ಕರ್ನಾಟಕ

ನವದೆಹಲಿ: ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್‌ 15 ಮತ್ತು 16ರಂದು ʼದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲಾ ಸಾಂಸ್ಕೃತಿಕ ಉತ್ಸವʼ ವನ್ನು ನವದೆಹಲಿಯ ಆರ್‌.ಕೆ.ಪುರಂ ಸೆಕ್ಟರ್‌-12ರ ರಾವ್‌ ತುಲಾರಾಂ ಮಾರ್ಗದ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅ.15ರಂದು ಸಂಜೆ 6 ಗಂಟೆಗೆ ಮಂಡ್ಯದ ಸದ್ವಿದ್ಯಾ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಮತ್ತು ಗಾಯನ, ಮಂಡ್ಯ ವಿವೇಕ ವಿದ್ಯಾ ಸಂಸ್ಥೆ ಕಲಾವಿದರಿಂದ ʼದೇವಿ ಮಹಾತ್ಮೆʼ ಮೂಡಲಪಾಯ ಯಕ್ಷಗಾನ ಕಾರ್ಯಕ್ರಮ ನಡೆಯುತ್ತದೆ.

ಇದನ್ನೂ ಓದಿ | Vande Bharat Express | ಕರ್ನಾಟಕಕ್ಕೆ ಬರಲಿದೆ 130 ಕಿ.ಮೀ. ವೇಗದಲ್ಲಿ ಚಲಿಸುವ ರೈಲು: ದಿನಾಂಕ, ಮಾರ್ಗ ಘೋಷಣೆ

ಅ.16ರಂದು ಬೆಳಗ್ಗೆ 11 ಗಂಟೆಗೆ ತುಮಕೂರಿನ ಕೈಲಾಸ ಕಲಾಧರ ಕಲ್ಚರಲ್ ಚಾರಿಟಬಲ್ ಟ್ರಸ್ಟ್ ಕಲಾವಿದರಿಂದ, ಡಾ. ಜಯಲಕ್ಷ್ಮೀ ಜಿತೇಂದ್ರ ಭಾಗವತ್ ಸಂಯೋಜನೆಯ ʼನವರಸದಲ್ಲಿ ದೇವರನಾಮʼ ನೃತ್ಯ ರೂಪಕವಿರಲಿದೆ. ಹಾಸನದ ಸುಪ್ರದಾ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್ ಕಲಾವಿದರಿಂದ ವಿದುಷಿ ಡಾ. ರಮ್ಯ ಸಿ.ಆರ್ ಸಂಯೋಜನೆಯ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ.

ಮಧ್ಯಾಹ್ನ 3 ಗಂಟೆಗೆ ಮಂಡ್ಯದ ಕರ್ನಾಟಕ ಸಂಘದ ಸದ್ವಿದ್ಯಾ ರಂಗ ತಂಡದಿಂದ ಕುವೆಂಪು ವಿರಚಿತ ʼಸ್ಮಶಾನ ಕುರುಕ್ಷೇತ್ರಂʼ ನಾಟಕ ನಡೆಯಲಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ವಿದ್ವಾನ್‌ ಉನ್ನತ್‌ ಎಚ್‌.ಆರ್‌ ಸಂಯೋಜನೆಯ ಭರತ ನಾಟ್ಯ ಕಾರ್ಯಕ್ರಮವನ್ನು ಹಾಸನದ ನಾಟ್ಯ ಕಲಾ ನಿವಾಸ್‌ ಕಲಾವಿದರು ನಡೆಸಿಕೊಡಲಿದ್ದಾರೆ.

ಗಣ್ಯರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಮಂಡ್ಯದ ಖ್ಯಾತ ಚರ್ಮ ರೋಗ ತಜ್ಞ, ಬಡವರ ವೈದ್ಯರು ಎಂದೇ ಹೆಸರಾದ ಡಾ. ಶಂಕ್ರೇ ಗೌಡ, ಬೆಂಗಳೂರಿನ ಎಸ್‌ಎಂಇ ಎಕ್ಸ್‌ಪ್ರೆಸ್‌ನ ಎಂಡಿ ಹಾಗೂ ಸಿಇಒ ರಾಜೇಶ್ ಗೌಡ ಮತ್ತು ಲೀಲಾ ರಾಜೇಶ್ ಗೌಡ, ಇಂಡಿಯಾ ಫಾರ್‌ ಐಎಎಸ್‌ ಅಕಾಡೆಮಿ ಸಹ ಸಂಸ್ಥಾಪಕ‌ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪಿ.ಸಿ.ಶ್ರೀನಿವಾಸ, ಮಂಡ್ಯದ ಪೂರ್ಣಿಮಾ ಪ್ಯಾಲೇಸ್‌ ಮಾಲೀಕ ಶಿವು, ಉದ್ಯಮಿ ಬಿ.ಎಂ.ಶಶಿಧರ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ನಿರ್ದೇಶಕ ಎಸ್‌.ಎ. ಸಚಿನ್‌ ಅವರನ್ನು ಸನ್ಮಾನಿಸಲಾಗುತ್ತದೆ.

ಇದನ್ನೂ ಓದಿ | ರಾಮಾಯಣ ಸರ್ಕ್ಯೂಟ್ ನಂತೆ ಪಂಚ ಆತ್ಮಲಿಂಗಗಳ ದರ್ಶನಕ್ಕೂ ಬೇಕಿದೆ ಸರ್ಕ್ಯೂಟ್ ಯೋಜನೆ

Exit mobile version