Site icon Vistara News

Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!

python spotted near Raichur YTPS

ರಾಯಚೂರು: ಇಲ್ಲಿನ ವೈಟಿಪಿಎಸ್‌ನಲ್ಲಿ (Raichur YTPS) ಅನಕೊಂಡ (Anaconda) ಮಾದರಿಯ ಹೆಬ್ಬಾವೊಂದು (python) ಪತ್ತೆಯಾಗಿದೆ. ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ ಮಾತ್ರವಲ್ಲ, ಅಂಜಿಕೆಯನ್ನೂ ಹುಟ್ಟಿಸಿದೆ. ಇಷ್ಟು ದೊಡ್ಡ ಗಾತ್ರದ ಹೆಬ್ಬಾವನ್ನು ಎಲ್ಲಿಯೂ ನೋಡಿಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ವಿಪರೀತವಾಗಿ ಭಯಗೊಂಡಿದ್ದಾರೆ. ಈ ವಿಡಿಯೊ ವೈರಲ್‌ (Video Viral) ಆಗಿದೆ.

ಇದು ರಾಯಚೂರಿನ ವೈಟಿಪಿಎಸ್ ವಿದ್ಯುತ್ ಘಟಕದ (YTPS Power Plant) ಸಮೀಪ ಪತ್ತೆಯಾಗಿದೆ. ರಾತ್ರಿ ವೇಳೆ ಕಾರೊಂದರಲ್ಲಿ ಸ್ಥಳೀಯರು ಹೋಗುತ್ತಿದ್ದಾಗ ರಸ್ತೆಯನ್ನು ಈ ಬೃಹತ್‌ ಗಾತ್ರದ ಹೆಬ್ಬಾವು ದಾಟುತ್ತಿತ್ತು. ಹಾಗಾಗಿ ಅವರು ಕಾರನ್ನು ನಿಲ್ಲಿಸಿ ಕ್ಷಣ ಕಾಲ ನೋಡಿದ್ದಾರೆ. ಕೂಡಲೇ ಮೊಬೈಲ್‌ ಎತ್ತಿಕೊಂಡು ವಿಡಿಯೊವನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Opposition Meet : ಘಟಬಂಧನ್‌ ಅಲ್ಲ ಘಟಶ್ರಾದ್ಧ; ರಾಜಕಾರಣಿಗಳ ಸೇವೆಗೆ IAS ಬಳಕೆಗೆ HDK ಕೆಂಡ

ಮೈನವಿರೇಳಿಸುವ ದೃಶ್ಯ

ಆ ಹೆಬ್ಬಾವು ಸುಮಾರು ಹದಿನೈದು ಅಡಿ ಉದ್ದ ಇರಬಹುದು ಎಂದು ಅಂದಾಜಿಸಲಾಗಿದೆ. ಉದ್ದಕ್ಕೆ ತಕ್ಕಂತೆ ಮೈಯನ್ನೂ ಹೊಂದಿರುವ ಅದನ್ನು ನೋಡಿದರೆ ಮೈನವಿರೇಳುತ್ತದೆ. ನಿಧಾನವಾಗಿ ಆ ಹಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ಮೂಲಕ ಹಾದು ಹೋಗಿದೆ. ಇದನ್ನು ವಿಡಿಯೊ ಮಾಡಿಕೊಳ್ಳುವವರೂ ಸಹ ಗಾಬರಿಯಿಂದಲೇ ಇರುವುದು ಗೊತ್ತಾಗಿದೆ.

ಇಲ್ಲಿದೆ ನೋಡಿ ಬೃಹತ್‌ ಗಾತ್ರದ ಹೆಬ್ಬಾವಿನ ವಿಡಿಯೊ

ವೈರಲ್‌ ಆಯ್ತು ವಿಡಿಯೊ

ಬಳಿಕ ಈ ವಿಡಿಯೊವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ (Social Media) ಹರಿಬಿಟ್ಟಿದ್ದಾರೆ. ರಾಯಚೂರಿನ ವೈಟಿಪಿಎಸ್‌ ಘಟಕದ ಬಳಿ ಇರುವ ರಸ್ತೆಯಲ್ಲಿ ಈ ಹಾವು ಸಂಚರಿಸಿದೆ ಎಂದು ಅಡಿ ಶೀರ್ಷಿಕೆಯನ್ನೂ ಬರೆದಿದ್ದಾರೆ. ಒಮ್ಮೆ ವಿಡಿಯೊ ಶೇರ್‌ ಆಗುತ್ತಿದ್ದಂತೆ ಜನರು ಅಚ್ಚರಿಗೊಂಡಿದ್ದಾರೆ. ಅವುಗಳನ್ನು ವಾಟ್ಸಪ್‌ (Whatsapp) ಸೇರಿದಂತೆ ಹಲವು ಕಡೆಗಳಲ್ಲಿ ಶೇರ್‌ ಮಾಡಿದ್ದಾರೆ. ಕೆಲವರು ಇದು ರಾಯಚೂರಿನಲ್ಲಿ ಅಲ್ಲವೇ ಅಲ್ಲ ಎಂದು ವಾದ ಮಾಡಿದ್ದಾರೆ. ಮತ್ತೆ ಕೆಲವರು ಇಷ್ಟು ದೊಡ್ಡ ಹೆಬ್ಬಾವು ಈಗ ಇರಲು ಸಾಧ್ಯವೇ? ಇದ್ದರೆ ಇಷ್ಟರಲ್ಲಿ ಒಮ್ಮೆಯಾದರೂ ಕಾಣಬೇಕಿತ್ತು. ಹೀಗೆ ಏಕಾಏಕಿ ಕಂಡಿದೆ ಎಂದರೆ ನಂಬಲು ಅಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: Weather Report : ಬಿರುಗಾಳಿ ಸಹಿತ ಭಾರಿ ಮಳೆ; ಮುಂದಿನ 48 ಗಂಟೆ ಈ ಜಿಲ್ಲೆಯವರು ಎಚ್ಚರವಾಗಿರಿ

ವೈಟಿಪಿಎಸ್ ಘಟಕದಲ್ಲಿ ಶುರುವಾಗಿದೆ ನಡುಕ

ಇದರ ಜತೆಗೆ ಮತ್ತೊಂದು ಭಯ ಕಾಣಿಸಿಕೊಂಡಿದೆ. ವೈಟಿಪಿಎಸ್‌ ಘಟಕದಲ್ಲಿ ಕೆಲಸ ಮಾಡುವವರು ಅತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಭಯದಲ್ಲಿಯೇ ಬರುತ್ತಿದ್ದಾರೆ. ಆ ಹಾವನ್ನು ವಿಡಿಯೊದಲ್ಲಿ ನೋಡಿದರೇ ಹೆದರಿಕೆ ಆಗುತ್ತದೆ. ಇನ್ನು ನಮ್ಮ ಎದುರಿಗೆ ಬಂದರೆ ಜೀವ ಉಳಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ನಮ್ಮದಾಗಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ತುರ್ತು ಕ್ರಮವನ್ನು ಕೈಗೊಳ್ಳಬೇಕು. ಒಂದು ವೇಳೆ ಈ ಹೆಬ್ಬಾವು ಇದ್ದಿದ್ದೇ ಆದರೆ, ಸೆರೆ ಹಿಡಿದು ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version