ಬೆಂಗಳೂರು: ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ವತಿಯಿಂದ ಸೆಪ್ಟೆಂಬರ್ 16ರಿಂದ 18ರವರೆಗೂ ನಗರದ ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರಮಟ್ಟದ ಬೈಠಕ್ ಏರ್ಪಡಿಸಲಾಗಿದೆ. ದೇಶದ ಹಲವಾರು ಭಾಗಗಳಿಂದ 700ಕ್ಕೂ ಅಧಿಕ ಬುಡಕಟ್ಟು ಹಾಗೂ ವನವಾಸಿಗಳ ಮುಖಂಡರು ಆಗಮಿಸಲಿದ್ದಾರೆ.
ಈ ಕುರಿತು ವನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷ ರಾಮಚಂದ್ರ ಖರಾಡಿ ಮಾತನಾಡಿ, ದೇಶದಲ್ಲಿರುವ ಕೋಟ್ಯಂತರ ಜನರ ಪೈಕಿ ಸಾವಿರಾರು ಜಾತಿ ಜನಾಂಗಗಳಿವೆ. ಇವುಗಳ ಪೈಕಿ 700ಕ್ಕೂ ಅಧಿಕ ಬುಡಕಟ್ಟು ಜನರ, ವನವಾಸಿ ಜನರ ಪಂಗಡಗಳಿವೆ. ಇವುಗಳ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಆಶ್ರಮ ಸತತವಾಗಿ ಪ್ರಯತ್ನಿಸುತ್ತಲೇ ಬಂದಿದೆ ಎಂದು ತಿಳಿಸಿದ್ದಾರೆ.
ವನವಾಸಿಗಳ ತಮ್ಮ ಆರೋಗ್ಯ ಕಾಪಾಡುವ ವಿಚಾರದಲ್ಲಿ ಬಹಳ ಹಿಂದುಳಿದ್ದಿದ್ದು, ವೈದ್ಯರ ಬಳಿ ಹೋಗಲು ನಾನಾ ಕಾರಣಗಳಿಂದ ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಅವರಿಗೆ ರಕ್ತಹೀನತೆ ಹಾಗೂ ಅಪೌಷ್ಟಿಕತೆ ಕಾಡುತ್ತಿದೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಸಲುವಾಗಿ ಅವರ ಗುಂಪುಗಳಲ್ಲಿರುವ ಕೆಲವರಿಗೆ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ನೀಡುವ ಶಿಕ್ಷಣ ನೀಡಲಾಗುತ್ತದೆ. ಜತೆಗೆ ಮರೆಯಾಗುತ್ತಿರುವ ವನವಾಸಿಗಳ ಪರಂಪರೆಯನ್ನು ಕಾಪಿಟ್ಟುಕೊಳ್ಳಲು ಬೇಕಾದ ವ್ಯವಸ್ಥೆ ಹಾಗೂ ತರಬೇತಿಯನ್ನು ಹೊಸ ಪೀಳಿಗೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Life guide | ಜೀವನದಲ್ಲಿ ಸಫಲರಾಗಲು ಬೆನ್ನಿಗೆ ಬೇಕು ಇಂಥ ಮಾರ್ಗದರ್ಶಕರು!