Site icon Vistara News

ಸಿಟ್ಟಿಗೆದ್ದು ಗಿರವಿ ಅಂಗಡಿಗೆ ಬೆಂಕಿ ಇಟ್ಟ ಗ್ರಾಹಕ; ಗಾಯಗೊಂಡ ಮಾಲೀಕ

#image_title

ಬೆಂಗಳೂರು: ಇಲ್ಲಿನ ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್‌ನಲ್ಲಿ ಚಿನ್ನ ಗಿರವಿ ಇಡಲು ಬಂದ ಗ್ರಾಹಕನೊಬ್ಬ ಸಿಟ್ಟಿಗೆದ್ದು ಅಂಗಡಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಅಂಗಡಿ ಮಾಲೀಕ ಭವರ್ ಲಾಲ್ (54) ಎಂಬುವವರು ಗಾಯಗೊಂಡಿದ್ದಾರೆ.

ಸಂತೋಷ್‌ ಬ್ಯಾಂಕರ್ಸ್‌ಗೆ ಚಿನ್ನಾಭರಣ ಅಡವಿಡಲು ಬಂದಿದ್ದ ಗ್ರಾಹಕನಿಗೆ 50 ಸಾವಿರ ರೂ. ನೀಡುವುದಾಗಿ ಮಾಲೀಕ ಭವರ್‌ಲಾಲ್‌ ತಿಳಿಸಿದ್ದಾರೆ. ಆದರೆ ಇದರಿಂದ ಸಿಟ್ಟಿಗೆದ್ದವನೇ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಅಂಗಡಿಗೆ ಹಾನಿ ಆಗಿದ್ದು, ಮಾಲೀಕನ ಬೆನ್ನು ಸುಟ್ಟಿದೆ.

ಗ್ರಾಹಕನ ಈ ಕೃತ್ಯಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಯಾವ ಕಾರಣಕ್ಕಾಗಿ ಆತ ಹೀಗೆ ಮಾಡಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಪೂರ್ವನಿಯೋಜಿತವಾಗಿ ಅಂಗಡಿಗೆ ಬೆಂಕಿ ಇಡಲು ಪೆಟೋಲ್‌ ತಂದಿದ್ದನೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ. ಸದ್ಯ ಮಾಲೀಕ ಭವರ್‌ ಲಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fire Accident: ಮೈಸೂರಿನಲ್ಲಿ ವಿದ್ಯುತ್‌ ತಂತಿ ತಗುಲಿ ಕಬ್ಬಿನ ಗದ್ದೆ ನಾಶ; ಕೊಪ್ಪಳದಲ್ಲಿ ಕಟಾವಿಗೆ ಬಂದಿದ್ದ ಬೆಳೆ ಬೆಂಕಿಗಾಹುತಿ

Exit mobile version