Site icon Vistara News

Animal Vs Human : ಆಹಾರ ಅರಸಿ ನಾಡಿಗೆ ಬಂದಿದ್ದ ಕೃಷ್ಣ ಮೃಗಕ್ಕೆ ಆಸರೆ, ಕಾಡುಕೋಣ ದಾಳಿಗೆ ಕುರಿಗಾಹಿ ಬಲಿ

animal Vs human

#image_title

ತುಮಕೂರು/ರಾಮನಗರ: ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿಯುತ್ತಲೇ (Animal Vs Human) ಇದೆ. ಕಾಡು ಪ್ರಾಣಿಗಳು ಮನುಷ್ಯರ ಆವಾಸ ಸ್ಥಾನಗಳಿಗೆ ಲಗ್ಗೆ ಇಡುವ ಘಟನೆಗಳು ಹೆಚ್ಚಾಗಿವೆ. ಇಲ್ಲಿ ದಾಖಲಿಸಲಾದ ಎರಡು ಘಟನೆಗಳಲ್ಲಿ ಒಂದು ಕಡೆ ಆಹಾರ ಅರಸಿ ನಾಡಿಗೆ ಬಂದ ಕೃಷ್ಣ ಮೃಗಕ್ಕೆ ಜನರು ಆಸರೆ ನೀಡಿದ್ದಾರೆ, ಇನ್ನೊಂದು ಕಡೆ ನಾಡಿಗೆ ಬಂದ ಕಾಡುಕೋಣವೊಂದು ಕುರಿಗಾಹಿಯನ್ನು ಬಲಿ ಪಡೆದಿದೆ.

ಮಧುಗಿರಿಯಲ್ಲಿ ಕೃಷ್ಣ ಮೃಗ ರಕ್ಷಣೆ

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣಮೃಗವನ್ನು ರಕ್ಷಿಸಲಾಗಿದೆ. ಹೊಸಕೆರೆ ಬಳಿಯಿರುವ ಕೆಪಿಟಿಸಿಎಲ್ ಗೆ ಸೇರಿದ ಆವರಣದಲ್ಲಿ ಕಾಣಿಸಿಕೊಂಡ ಕೃಷ್ಣ ಮೃಗವನ್ನು ಕೆಪಿಟಿಸಿಎಲ್ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಕೃಷ್ಣಮೃಗ ಕಂಡ ಕೂಡಲೇ ಕೆಪಿಟಿಸಿಎಲ್ ಸಿಬ್ಬಂದಿ ಅರಣ್ಯಾಧಿಕಾರಿಗಳಿಗೆ ಮಾಹಿತಿ‌ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಣ್ಣ ಪುಟ್ಟ ಗಾಯವಾಗಿದ್ದ ಕೃಷ್ಣ ಮೃಗಕ್ಕೆ ಚಿಕಿತ್ಸೆ ನೀಡಿ ರಕ್ಷಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಕೃಷ್ಣ ಮೃಗವನ್ನು ಮೈದನಹಳ್ಳಿಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ರಾಮನಗರ ಬಳಿ ಕುರಿಗಾಯಿ ಮೇಲೆ ಕಾಡುಕೋಣ ದಾಳಿ

ರಾಮನಗರ ‌ಜಿಲ್ಲೆ ಕನಕಪುರ ‌ತಾಲೂಕು ಸಂಗಮ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಗ್ರಾಮವಾದ ಕಾಡುಶಿವನಹಳ್ಳಿ ದೊಡ್ಡಿ ಗ್ರಾಮದ ಬಳಿ ಕಾಡು ಕೋಣವೊಂದು ದಾಳಿ ನಡೆಸಿ ಕುರಿಗಾಹಿಯನ್ನು ಕೊಂದೇ ಹಾಕಿದೆ.

ಕಾಡುಶಿವನಹಳ್ಳಿ ದೊಡ್ಡಿ ನಿವಾಸಿಯಾಗಿರುವ ನಾಗನಾಯ್ಕ(65) ಕಾಡಂಚಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ತೀವ್ರ ತಿವಿತಕ್ಕೆ ಒಳಗಾದ ನಾಗಾ ನಾಯ್ಕ ಮೃತಪಟ್ಟಿದ್ದಾರೆ.

ಸಾತನೂರು ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ Elephant attack : ಕಡಬ ಬಳಿ ಕಾಡಾನೆ ಹಿಡಿದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರಿಂದ ಹಲ್ಲೆ ಯತ್ನ, ಕಲ್ಲು ತೂರಾಟ

Exit mobile version