Site icon Vistara News

ಜ. 20ರೊಳಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಘೋಷಿಸಿ; ಸರ್ಕಾರಕ್ಕೆ ಗಡುವು ನೀಡಿದ ಜಯಮೃತ್ಯುಂಜಯ ಶ್ರೀ

jayamruthyunjaya swamiji

ಹಾವೇರಿ: 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ (Panchamasali Reservation) ಮತ್ತೆ ಆರಂಭವಾಗಿದೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಗ್ರಾಮದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇಷ್ಟಲಿಂಗ ಪೂಜೆ ಮೂಲಕ ಶ್ರೀಗಳು ಪ್ರತಿಭಟನೆಗೆ ಚಾಲನೆ ನೀಡಿದರು. ನಂತರ ಪ್ರತಿಭಟನಾಕಾರರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಯಿತು.

ಮೊಟೇಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಯಿತು. ಇದರಿಂದ ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಅವರು, 2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ರಾಜಕಾರಣಿಗಳು ಯಾರೂ ಹೋರಾಟಕ್ಕೆ ಬಂದಿಲ್ಲ. ಸ್ವಾಮೀಜಿಗಳೇ ಬಂದಿದ್ದಾರೆ. ಈ ಹಿಂದಿನ ಸರ್ಕಾರ 2ಡಿ ಮೀಸಲಾತಿ ನೀಡಿತು. ಆದರೆ ಅದು ಜಾರಿಗೆ ಆಗಿಲ್ಲ. ಯಾವುದೇ ಸರ್ಕಾರ ಇರಲಿ, ಕಾಂಗ್ರೆಸ್, ಬಿಜೆಪಿ ಇರಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ಬೇರೊಬ್ಬ ಸ್ವಾಮೀಜಿ 2ಡಿ ಮೀಸಲಾತಿ ತೋರಿಸಿ, ಸಮಾಜಕ್ಕೆ ಮೀಸಲಾತಿ ಸಿಕ್ಕಿತು ಎಂದರು. ಸಿದ್ದರಾಮಯ್ಯನವರೇ ನಮಗೆ ಅನುದಾನ ಬೇಕಿಲ್ಲ, ಅಧಿಕಾರ ಬೇಕಿಲ್ಲ. 12 ಶಾಸಕರನ್ನು ನೀಡಿದ್ದೇವೆ. ಆದರೆ, 2 ತಿಂಗಳು ಕಳೆದರು ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಲಿಂಗಾಯತರು ಬೀದಿಯಲ್ಲಿ ಕುಳಿತು ಪೂಜೆ ಮಾಡಿದರೂ ನಿಮಗೆ ಕರುಳು ಚುರುಕ್ ಎನ್ನಲಿಲ್ಲ. 20 ದಿನ ಅದರೂ ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಯಾರು ಅನ್ಯಾಯ ಮಾಡುತ್ತಾರೋ ಅವರ ಕುರ್ಚಿ ಅಲ್ಲಾಡಿಸುವ ಶಕ್ತಿ ಇದೆ. ಲೋಕಸಭಾ ಚುನಾವಣೆಯ ಒಳಗೆ ನಮ್ಮ ಮೀಸಲಾತಿ ಬಗ್ಗೆ ನಿರ್ಧಾರ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Yuva Nidhi Scheme: ಯುವನಿಧಿ ಮೂಲಕ ಐದೂ ಗ್ಯಾರಂಟಿ ಜಾರಿ; ಈ ಸಾಧನೆ ಯಾರೂ ಮಾಡಿಲ್ಲ; ಸಿಎಂ ಸಿದ್ದರಾಮಯ್ಯ

ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಪುಣ್ಯಕಟ್ಟಿಕೊಳ್ಳಿ. 2ಎ ಮೀಸಲಾತಿ ಸಿಕ್ಕರೆ ಸಾಕು, ನಮ್ಮ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತದೆ. ಜ.20ರೊಳಗೆ ಒಳಗೆ ಸಚಿವ ಸಂಪುಟ ಸಮಿತಿ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು. ಬಜೆಟ್ ಅಧಿವೇಶನ ಒಳಗೆ ತೀರ್ಮಾನ ಆಗದಿದ್ದರೆ, ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version