ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ಅಟ್ಯಾಕ್ ಆಗಿದೆ. ಪರಿಚಯಸ್ಥನಿಂದಲೇ ಮಹಿಳೆ ಮೇಲೆ ಈ ದಾಳಿ ನಡೆದಿದೆ. ಮಹಿಳೆ ಹಾಗೂ ಈಗ ಆ್ಯಸಿಡ್ ಹಾಕಿದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಮದುವೆ ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು ಎನ್ನಲಾಗಿದೆ.
ಇದನ್ನೂ ಓದಿ | Acid Attack | ಆ್ಯಸಿಡ್ ನಾಗೇಶ್ ಸ್ವ-ಇಚ್ಛಾ ಹೇಳಿಕೆಯಲ್ಲಿ ಏನಿದೆ? ಇಲ್ಲಿದೆ ಫುಲ್ ಡಿಟೇಲ್ಸ್
ಕಾಮಾಕ್ಷಿಪಾಳ್ಯದಲ್ಲಿ ನಡೆದ ಆ್ಯಸಿಡ್ ದಾಳಿ ಘಟನೆ ಮಾಸುವ ಮೊದಲೇ ಈ ಘಟನೆ ವರದಿಯಾಗಿದೆ. ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ಅಹಮದ್ ಎಂಬುವನಿಂದ ಈ ದಾಳಿ ನಡೆದಿದೆ. ಆತನನ್ನು ಬಂಧಿಸಲಾಗಿದೆ. ಇಲಿಯಾಸ್ ನಗರದ ಮಹಿಳೆ ಮತ್ತು ಅಹಮದ್ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು.
ಆರೋಪಿ ಅಹಮದ್ ಹಾಗೂ ಮಹಿಳೆ ಕೆ ಎಸ್ ಲೇಔಟ್‌ನ ಕರ್ನಾಟಕ ಫ್ರೇಗ್ನೆನ್ಸ್ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಮಹಿಳೆಗೆ ಮದುವೆ ಆಗಿ ಮೂವರು ಮಕ್ಕಳಿದ್ದು, ಆರೋಪಿ ಅಹಮದ್‌ಗೂ ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಬಳಿ ಅಹಮದ್ ಮದುವೆ ಆಗೋಣ ಎಂದು ದೇಪದೆ ಒತ್ತಾಯಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ಮಹಿಳೆಯು ಎರಡು ತಿಂಗಳ ಹಿಂದೆ ಮಹಿಳೆ ಕೆಲಸ ಬಿಟ್ಟಿದ್ದಳು.
ಇತ್ತೀಚೆಗೆ ಜೆ ಪಿ ನಗರದ ಬಳಿಯಲ್ಲಿರುವ ಫಾರೆಸ್ಟ್ ಫ್ರೇಗ್ನೆನ್ಸ್ ಅಗರಬತ್ತಿ ಫ್ಯಾಕ್ಟರಿಗೆ ಮಹಿಳೆ ಕೆಲಸಕ್ಕೆ ಸೇರಿದ್ದಳು. ಶುಕ್ರವಾರ ಆರೋಪಿ ಫ್ಯಾಕ್ಟರಿ ಬಳಿ ಬಂದು ಮಹಿಳೆಯನ್ನು ಕರೆದೊಯ್ದಿದ್ದ. ಕೈಯಲ್ಲಿ ಅದಾಗಲೇ ಟಾಯ್ಲೆಟ್‌ಗೆ ಬಳಸುವ ಆ್ಯಸಿಡ್ ತಂದಿದ್ದ. ಜೆ. ಪಿ ನಗರ ಮೆಟ್ರೋ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ ಮತ್ತೆ ಮದುವೆಯ ಪ್ರಸ್ತಾಪ ಮಾಡಿದ. ಮಹಿಳೆ ಎಂದಿನಂತೆ ನಿರಾಕರಿಸಿದ್ದರು. ನಂತರ ಕೆ ಎಸ್ ಲೇಔಟ್‌ನಿಂದ ಜೆ ಪಿ ನಗರದ ಕಡೆ ಹೋಗುತ್ತಿದ್ದ ಮಹಿಳೆ ಮೇಲೆ ಸಾರಕ್ಕಿ ಸಿಗ್ನಲ್ ಬಳಿ ಅಡ್ಡಗಟ್ಟಿದ ಆರೋಪಿ, ಮುಖಕ್ಕೆ ಆ್ಯಸಿಡ್ ಹಾಕಿ ಪರಾರಿಯಾದ.
ಮಹಿಳೆಯ ಮುಖದ ಸ್ವಲ್ಪ ಭಾಗ ಸುಟ್ಟು ಹೋಗಿದೆ. ಬಲಗಣ್ಣಿಗೂ ಗಂಭೀರವಾದ ಗಾಯವಾಗಿದೆ. ಮಹಿಳೆ ಈಗ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಎರಚಿದ್ದು ಆ್ಯಸಿಡ್ ಮಾದರಿಯ ಟಾಯ್ಲೆಟ್ ಕ್ಲೀನರ್ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ದುಷ್ಕರ್ಮಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ
ಕುಮಾರಸ್ವಾಮಿ ಲೇಔಟ್ ಹಾಗೂ ಜೆ ಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಪೊಲೀಸರು ಶೋಧ ನಡೆಸಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನು ಓದಿ | Acid Attack | 8 ಕೆಜಿ ಆ್ಯಸಿಡ್ ಇಟ್ಟುಕೊಂಡಿದ್ದ ನಾಗೇಶ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸ್ತಿರೋದು ಒಂದೇ ಶಬ್ದ