ಬಳ್ಳಾರಿ: ಹುಚ್ಚು ನಾಯಿ ಕಡಿತಕ್ಕೆ ನಗರದಲ್ಲಿ ಮತ್ತೊಂದು ಮಗು ಕೊನೆಯುಸಿರೆಳೆದಿದೆ. ಕೆಲವು ತಿಂಗಳ ಹಿಂದಷ್ಟೇ ಬಾದನಹಟ್ಟಿ ಗ್ರಾಮದ ಎರಡು ಮಕ್ಕಳು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮಗು ನಾಯಿ ದಾಳಿಗೆ (Dog Attack) ಬಲಿಯಾಗಿದೆ.
ನಗರದ 31 ನೇ ವಾರ್ಡ್ ನಿವಾಸಿ ಕಿಶಾರ್ ಎನ್ನುವರ ಪುತ್ರಿ ತಾಯಿಬಾ (4) ಮೃತ ಬಾಲಕಿ. ಫೆಬ್ರವರಿ 7ರಂದು ವಟ್ಟಪ್ಪಗೆರೆ ಪ್ರದೇಶದಲ್ಲಿ 30 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿತ್ತು. ಅಂದು ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ಹೆಚ್ಚುವರಿ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಶನಿವಾರ ಮೃತಪಟ್ಟಿದೆ. ಬಳ್ಳಾರಿಯಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಯಿತು,
ಇದನ್ನೂ ಓದಿ | Robbery Case: ಯಾದಗಿರಿಯಲ್ಲಿ ಮನೆಗೆ ನುಗ್ಗಿದ ಮುಸುಕುಧಾರಿಗಳಿಂದ ಗನ್ ತೋರಿಸಿ ಲೂಟಿ; ತಪ್ಪಿಸಿಕೊಂಡಿದ್ದೇ ರೋಚಕ
ಬಳ್ಳಾರಿಯಲ್ಲಿ ಪದೇಪದೆ ಹುಚ್ಚು ನಾಯಿ ದಾಳಿ ಪ್ರಕರಣಗಳು ಕಂಡುಬರುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.