Site icon Vistara News

Application invited | ಸಂಸ್ಕೃತದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ; ಅರ್ಜಿ ಆಹ್ವಾನ

student

ಬೆಂಗಳೂರು: 2022ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯ ಸಂಸ್ಕೃತ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮೇಧಾನಮನಮ್ ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸುವ ಸಲುವಾಗಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ (ರಿ) ಬೆಂಗಳೂರು ವತಿಯಿಂದ ಅರ್ಜಿ (Application invited) ಆಹ್ವಾನಿಸಲಾಗಿದೆ.

ದ್ವಿತೀಯ PU ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಕಳುಹಿಸಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಹೆಸರು, ವಿಳಾಸ, ವಾಟ್ಸಪ್‌ ಸಂಖ್ಯೆ ಹಾಗೂ ಇ-ಮೇಲ್‌ ಬರೆದು ಪ್ರತಿಷ್ಠಾನದ ವಿಳಾಸಕ್ಕೆ ಆಗಸ್ಟ್‌ 30ರ ಒಳಗೆ ತಲಪುವಂತೆ ಕಳಿಸಿಕೊಡಲು ಕೋರಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ ಹೀಗಿದೆ
ಕಾರ್ಯದರ್ಶಿಗಳು, ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನಮ್
#130, ಗೃಹಲಕ್ಷ್ಮೀ ಲೇಔಟ್, 2ನೇ ಹಂತ, ಕಮಲಾನಗರ 3ನೇ ಮೈನ್, ಬೆಂಗಳೂರು-560079
ಹೆಚ್ಚಿನ ಮಾಹಿತಿಗಾಗಿ- 9448243724

ಇದನ್ನೂ ಓದಿ | ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಡಿಜಿಟಲ್ ಹೆಲ್ತ್ ಯೋಜನೆ; ರಾಜ್ಯ ಕಾರ್ಮಿಕ ಇಲಾಖೆಯಿಂದ ಜಾರಿ

Exit mobile version