Site icon Vistara News

ವಸತಿ ಶಿಕ್ಷಣ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ವಸತಿ ಶಿಕ್ಷಣ

ಬೆಂಗಳೂರು : ನಗರದ ಬಿಲಿಯರ್ಡ್ಸ್ ಕ್ಲಬ್‌ನಲ್ಲಿ ಆಗಸ್ಟ್ ೧೭ರಂದು ನಡೆದ ವಸತಿ ಶಿಕ್ಷಣ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಂಕರಗೌಡ ಎನ್. ಹೊಸಮನಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಮನೋಹ‌ರ್‌ ವೈ.ಸಿ. ಮತ್ತು ಕೆ. ಬಸವಾನಂದ ಆಯ್ಕೆಯಾದರು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ. ಶ್ರೀನಿವಾಸಗೌಡ ಮತ್ತು ಖಜಾಂಚಿಯಾಗಿ ರಾಧಾಕೃಷ್ಣ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Exit mobile version